ಆಟೋ ರಿಕ್ಷಾ ಚಾಲಕರ ನಡುವೆ ಹೊಡೆದಾಟ: 5 ತಿಂಗಳ ಬಳಿಕ ವಿಡಿಯೋ ವೈರಲ್?

ಆಟೋ ರಿಕ್ಷಾ ಚಾಲಕರ ನಡುವೆ ಹೊಡೆದಾಟ: 5 ತಿಂಗಳ ಬಳಿಕ ವಿಡಿಯೋ ವೈರಲ್?

Kadaba Times News

ಕಡಬ ಟೈಮ್ಸ್(KADABA TIMES):ಐದು ತಿಂಗಳ ಹಿಂದೆ ಆಟೋ ರಿಕ್ಷಾ ಚಾಲಕರಿಬ್ಬರಲ್ಲಿ ಪರಸ್ಪರ ಮಾತಿನ ಚಕಮಕಿ ಬೆಳೆದು ಹಲ್ಲೆ ನಡೆದ ಘಟನೆದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ಇದು ಪುತ್ತೂರಿನ  ಕೂರ್ನಡ್ಕ ಪರಿಸರದಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ಆಟೋ ರಿಕ್ಷಾ ಚಾಲಕರಿಬ್ಬರು ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿ ಕೊನೆಗೆ ಹಲ್ಲೆ ನಡೆಸಿದ್ದಾರೆ. ಸಮವಸ್ತ್ರ ಧರಿಸಿದ ಆಟೋ ರಿಕ್ಷಾ ಚಾಲಕ ಮತ್ತು ಸಮವಸ್ತ್ರ ಧರಿಸದ ರಿಕ್ಷಾ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ.

ಕೊನೆಗೆ ಸಮವಸ್ತ್ರ ಧರಿಸಿದ ರಿಕ್ಷಾ ಚಾಲಕ ಯಾವುದೋ ಗಿಡದ ಕೋಲಿನಿಂದ ಹಲ್ಲೆ ನಡೆಸುವ ವಿಡಿಯೋ ಕಾಣಿಸುತ್ತಿದೆ. ಈ ಘಟನೆ ನಡೆದ ಬರೊಬ್ಬರಿ 5ತಿಂಗಳಾಗಿದೆ. ಆದರೆ ಯಾಕಾಗಿ ನಡೆದಿದೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ಮಾತ್ರ  ಈಗ  ಸಾಮಾಜಿಕ ಜಾಲತಾಣದಲ್ಲಿ ಶರವೇಗದಲ್ಲಿ ವೈರಲ್ ಆಗುತ್ತಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top