ಸಾಲು ಸಾಲು ಹಬ್ಬಗಳ ಹಿನ್ನೆಲೆ:ಕರಾವಳಿಗರಿಗೆ ಶಾಕ್ ನೀಡಿದ ಮಲ್ಲಿಗೆ ದರ

ಸಾಲು ಸಾಲು ಹಬ್ಬಗಳ ಹಿನ್ನೆಲೆ:ಕರಾವಳಿಗರಿಗೆ ಶಾಕ್ ನೀಡಿದ ಮಲ್ಲಿಗೆ ದರ

Kadaba Times News

ಕಡಬ ಟೈಮ್ಸ್(KADABA TIMES):ಸಾಲು ಸಾಲು ಹಬ್ಬಗಳ ಸಂಭ್ರಮದಲ್ಲಿರುವ ಕರಾವಳಿಗರಿಗೆ ಶಂಕರಪುರ‌ ಮಲ್ಲಿಗೆ ಭಾರೀ ಶಾಕ್ ನೀಡಿದ್ದು, ಮಲ್ಲಿಗೆಯ ದರ ಎರಡು ಸಾವಿರ ರೂಪಾಯಿ ಸನಿಹಕ್ಕೆ ಬಂದಿದೆ.‌

ಮಲ್ಲಿಗೆಯ ದರ ಅಟ್ಟೆಗೆ 2100 ರೂಪಾಯಿ ನಿಗದಿಯಾಗಿದ್ದು, 2500 ರೂಪಾಯಿ ತನಕ ಮಾರಾಟವಾಗುತ್ತಿದೆ. ಇದು ಈ ಬಾರಿಯ ಹೆಚ್ಚಿನ ದರವಾಗಿದೆ. ಶಂಕರಪುರ ಕಟ್ಟೆಯಲ್ಲಿ ಮಾರಾಟಗೊಳ್ಳುವ ಮಲ್ಲಿಗೆ ದರವಾಗಿದ್ದು‌ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಮಲ್ಲಿಗೆ ದರಗಳು ಬದಲಾವಣೆಗೊಳ್ಳುತ್ತಿರುತ್ತದೆ.

ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಮಲ್ಲಿಗೆಯ ದರ ಕಡಿಮೆಯಾಗಿರುತ್ತದೆ.ನಾಳೆ ವರಮಹಾಲಕ್ಷ್ಮಿ ಪೂಜೆ ನಡೆಯಲಿದ್ದು, ಇದೂ ಕೂಡ ಬೆಲೆ ಏರಿಕೆಗೆ ಒಂದು ಕಾರಣವಾದರೆ,ಭಾರೀ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದು ಇದರಿಂದಾಗಿ ಮಲ್ಲಿಗೆಯ ದರ ಹೆಚ್ಚಾಗಿದೆ ಎನ್ನಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top