




ಕಡಬ ಟೈಮ್ಸ್(KADABA TIMES):ಭಾರೀ ಮಳೆಯಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ತೋಡಿನಲ್ಲಿ ಕೊಚ್ಚಿ ಹೋಗಿದ್ದ ನಿವೃತ್ತ ಶಿಕ್ಷಕಿಯ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.ಭೀಮನಡಿ ಕುರಕುಂಡದ ರವೀಂದ್ರನ್ ಎಂಬವರ ಪತ್ನಿ ಲತಾ (57) ಮೃತಪಟ್ಟವರು.
ಘಟನೆ ನಡೆದ ಅಲ್ಪ ದೂರದ ತೋಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಬುಧವಾರ ಬೆಳಗ್ಗೆ ಮನೆ ಸಮೀಪ ಪ್ರವಾಹಕ್ಕೆ ಸಿಲುಕಿದ ಲತಾ ಅವರು ತೋಡಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು, ಪರಿಸರ ವಾಸಿಗಳು ಶೋಧ ನಡೆಸಿದ್ದರು. ಆದರೆ ಮೃತ ದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮತ್ತೆ ಶೋಧ ನಡೆಸಿದ್ದು, ಅಲ್ಪ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ. ವೆಳ್ಳರಿಕುಂಡು ಠಾಣೆ ಪೊಲೀಸರು ಪ್ರಕರಣದ ಮಹಜರು ನಡೆಸಿದ್ದಾರೆ.