ಕಡಬ: ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಯುವತಿಯ ಪ್ರಾಣ ಪಕ್ಷಿ ಹಾರಿ ಹೋಯ್ತು

ಕಡಬ: ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಯುವತಿಯ ಪ್ರಾಣ ಪಕ್ಷಿ ಹಾರಿ ಹೋಯ್ತು

Kadaba Times News

ಕಡಬ:  ಅನಾರೋಗ್ಯದಿಂದ ಬಳಲುತ್ತಿದ್ದ ಕುಂತೂರು ಗ್ರಾಮದ ಯುವತಿ ಅಸ್ವಸ್ಥಗೊಂಡು  ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ  ಮೃತಪಟ್ಟ   ಸಾವನ್ನಪ್ಪಿದ ಘಟನೆ ನಡೆದಿದೆ.


ಕಡಬ ತಾಲೂಕಿನ ಕುಂತೂರು ಗ್ರಾಮದ ಇಡಾಳ ನಿವಾಸಿ ಕರಿಯಪ್ಪ ಯಾನೆ ಕೇಶವ ಗೌಡ ಎಂಬವರ ಪುತ್ರಿ ಶ್ವೇತಾ(23ವ)  ಮೃತಪಟ್ಟವರು.


ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈಕೆಗೆ   ಆರಂಭದಲ್ಲಿ ಜ್ವರ ಕಾಣಿಸಿಕೊಂಡು ಪುತ್ತೂರಿನ ಖಾಸಗಿ ಆಸ್ಪೆçಯಲ್ಲಿ ದಾಖಲಾಗಿದ್ದರು. ಬಳಿಕ ಮಂಗಳೂರಿನ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಕಿಡ್ನಿ ಸಂಭಂದಿತ ಖಾಯಿಲೆ ವಾಸಿಯಾಗಿರಲಿಲ್ಲ.  


 ಸೋಮವಾರ ಬೆಳಿಗ್ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಆಲಂಕಾರಿನ ಖಾಸಗಿ ಕ್ಲಿನಿಕ್‌ಗೆ ಕರೆದುಕೊಂಡು ಬಂದ ವೇಳೆ ಅಲ್ಲಿ  ಅಸ್ವಸ್ಥಗೊಂಡು   ಬಳಿಕ ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ  ವೇಳೆ   ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದೆ . ಮೃತ ಯವತಿ ಪದವೀಧರೆಯಾಗಿದ್ದಳು.

Short Summary in English:Kadaba: A 23-year-old woman named Shwetha from Idala, Kunturu village, passed away while being taken to the hospital. She had been suffering from a kidney-related illness for the past two years. Initially treated for fever at a private hospital in Puttur and later at various hospitals in Mangaluru, her condition did not improve. On Monday morning, she developed breathing difficulties and collapsed at a private clinic in Alankaru. She died on the way to Puttur hospital. Shwetha was a graduate.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top