




KADABA TIMES(ಕಡಬ ಟೈಮ್ಸ್) :ಬೆಂಗಳೂರಿನ ಹೋಟೆಲೊಂದರಲ್ಲಿ ದುಡಿಯುತ್ತಿದ್ದ ಕಡಬದ ವ್ಯಕ್ತಿಯೋರ್ವರು ಕುಸಿದು ಬಿದ್ದು ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಫಲಿಸದೆ ಇಂದು (ಜುಲೈ 18 ರಂದು) ಆಸ್ಪತ್ರೆಯಲ್ಲಿ ನಿಧನ ಹೊಂದಿರುವುದಾಗಿ ತಿಳಿದು ಬಂದಿದೆ.
ಕಡಬ
ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ
ಕೊರಗಪ್ಪ
ಕುಂಬಾರ ಅವರ ಪುತ್ರ ಹರೀಶ್ ಮೃತಪಟ್ಟವರು.
ಆರಂಭದಲ್ಲಿ
ಹೋಟೆಲ್ ನಲ್ಲಿಯೇ ಕೆಲಸ ಮಾಡುತ್ತಿದ್ದ ಅವರು ಬಳಿಕ ಕಡಬದಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದರು. ಬಳಿಕ
ಮತ್ತೆ ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಹೋಟೆಲ್ ನಲ್ಲಿ ರಕ್ತದೊತ್ತಡದಿಂದ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ
ದಾಖಲಿಸಿದರೂ ಬ್ರೈನ್ ಸ್ಟ್ರೋಕ್ ನಿಂದ ನಿಧರಾಗಿರುವುದಾಗಿ
ತಿಳಿದು ಬಂದಿದೆ.
ಪಾರ್ಥಿವ
ಶರೀರವು ಇಂದು ಮದ್ಯಾಹ್ನ ವೇಳೆ ಕಡಬಕ್ಕೆ ತಲುಪಲಿದ್ದು
ಪಂಜ ರಸ್ತೆಯಲ್ಲಿನ ಕದಂಬ ಆಟೋ ನಿಲ್ದಾಣದಲ್ಲಿ ಅಟೋ ಚಾಲಕ ಮಾಲಕರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಲಿದೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.