Viral video: ಸ್ಕೂಟರ್ ನಲ್ಲಿ ಅರೆ ಬೆತ್ತಲೆ ಸವಾರಿ ವೀಡಿಯೋ ವೈರಲ್: ನಿಜವಾಗಿಯೂ ನಡೆದದ್ದೇನು?

Viral video: ಸ್ಕೂಟರ್ ನಲ್ಲಿ ಅರೆ ಬೆತ್ತಲೆ ಸವಾರಿ ವೀಡಿಯೋ ವೈರಲ್: ನಿಜವಾಗಿಯೂ ನಡೆದದ್ದೇನು?

Kadaba Times News

 ಕಡಬ ಟೈಮ್ಸ್, (KADABA TIMES):  ವ್ಯಕ್ತಿಯೊಬ್ಬರು ಬಟ್ಟೆ ಧರಿಸದೇ ವಾಹನ ಚಲಾಯಿಸಿಕೊಂಡು ಮಣಿಪಾಲ ಸುತ್ತಿದ ವಿಡಿಯೋ ವೈರಲ್ ಆಗಿದ್ದು, ಆಟಿ ಅಮಾವಾಸ್ಯೆ ಆಗಿರುವುದರಿಂದ ಬೆಳಿಗ್ಗೆ ಬೇಗನೆ ಎದ್ದು ಹಾಲೆ ಕೆತ್ತೆ ತರಲು ಹೋಗಿರಬಹುದು. ವಾಪಸ್ ಬರುವಾಗ ತಡವಾಗಿದೆ  ಎಂದು ವಿಶ್ಲೇಷಣೆ ಮಾಡಿರುವ ವಿಚಾರ ವೈರಲ್ ಕೂಡ ಆಗಿತ್ತು.  ಈ ರೀತಿಯ ಸ್ಕೂಟರ್ ಸವಾರಿಗೆ ಕಾರಣ ಏನು ಅನ್ನೋದು ಈಗ ತಿಳಿದುಬಂದಿದೆ.



ಉಡುಪಿ ಜಿಲ್ಲೆಯ  ಮಣಿಪಾಲ ಪರಿಸರದಲ್ಲಿ ವ್ಯಕ್ತಿಯೊಬ್ಬರು ಕೇವಲ ಬನ್ನಿಯನ್ಧ ರಿಸ ಪ್ಯಾಂಟು ಒಳಚಡ್ಡಿ ಇಲ್ಲದೆ ಸ್ಕೂಟರ್ ನಲ್ಲಿ ಸವಾರಿ ಮಾಡುತ್ತಿರುವ ದೃಶ್ಯ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಸ್ಕೂಟರ್ ನಲ್ಲಿ ಅರೆಬೆತ್ತಲೆಯಾಗಿ ಸವಾರಿ ಮಾಡುತ್ತಿರುವ ದೃಶ್ಯವನ್ನು ದಾರಿಹೋಕರು, ವಾಹನಗಳಲ್ಲಿ ತೆರಳುತ್ತಿರುವವರು ಬೈಕ್ ನಲ್ಲಿ ತೆರಳುತ್ತಿರುವವರು ತಮ್ಮ  ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಈ ಕುರಿತು ನಾನಾ ರೀತಿಯ ಚರ್ಚೆ ವಿಮರ್ಶೆ ವಾದಮಂಡನೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿತ್ತು.


ಇದೀಗ ವ್ಯಕ್ತಿಯ ಮನೆಯವರಿಗೆ ಸಂಪರ್ಕಿಸಿದಾಗ ನಿಜ ವಿಚಾರ ಹೊರ ಬಂದಿದೆ.  ಆ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇದ್ದು, ಡಿಪ್ರೆಶನ್ ಕಾಯಿಲೆಯ ಕಾರಣದಿಂದಾಗಿ ಆ ರೀತಿ ವರ್ತಿಸಿದ್ದಾರೆ. ಘಟನೆಯು ಕೂಡ ಒಂದು ದಿನದ ಹಿಂದೆ ನಡೆದಿದ್ದು  ಆ ವ್ಯಕ್ತಿಯು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ವಿಡಿಯೋಗಳನ್ನು ವೆಬ್ ಸುದ್ದಿವಾಹಿನಿಗಳು ಫೇಸ್ಬುಕ್ ಇನ್ಸ್ಟಾ ಸಹಿತ ಜಾಲತಾಣಗಳಿಂದ ತೆಗೆದು ಹಾಕುವಂತೆ ಮನೆಯವರು ಮನವಿ ಮಾಡಿದ್ದಾರೆ.

A video of a man riding a scooter in Manipal wearing only pants (without innerwear) went viral, sparking social media debates and speculations. It is now confirmed that the man suffers from mental health issues and depression, which led to his unusual behavior. He is currently admitted to a hospital for treatment. The family has requested the removal of the video from social media and news portals to protect his privacy.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top