ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ನದಿಗೆ ಹಾರಿರುವ ಶಂಕೆ:ಮುಳುಗು ತಜ್ಞ ಈಶ್ವರ ಮಲ್ಪೆ ಎಂಟ್ರಿ

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ನದಿಗೆ ಹಾರಿರುವ ಶಂಕೆ:ಮುಳುಗು ತಜ್ಞ ಈಶ್ವರ ಮಲ್ಪೆ ಎಂಟ್ರಿ

Kadaba Times News

ಕಡಬ ಟೈಮ್( KADABA TIMES):  ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ಹೊನ್ನಪ್ಪ ದೇವರಗದ್ದೆ ನಾಪತ್ತೆಯಾಗಿ ಮೂರು ದಿನ ಕಳೆದರೂ ಇನ್ನು ಪತ್ತೆಯಾಗಿಲ್ಲ. ಇತ್ತ SDRF(State Disaster Response Force) ತಂಡ ಕುಮಾರಧಾರ ನದಿಗೆ ಬಿದ್ದಿರುವ ಶಂಕೆ ಹಿನ್ನೆಲೆಯಲ್ಲಿ ಶೋಧ ಕಾರ್ಯ ಮುಂದುವರಿಸಿದೆ. ಕುಟುಂಬಸ್ಥರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.



ಈ ಘಟನೆ ಬೆನ್ನಲ್ಲೇ ಸುಳ್ಯ ಕ್ಷೇತ್ರದ ಶಾಸಕಿ  ಭಾಗೀರಥಿ ಮುರುಳ್ಯ ನಾಪತ್ತೆಯಾದ ವ್ಯಕ್ತಿಯ ಮನೆಮಂದಿಯನ್ನು ಭೇಟಿ ಮಾಡಿ  ಕುಟುಂಬಸ್ಥರಿಗೆ  ಮಾನಸಿಕ ಧೈರ್ಯ ತುಂಬಿದ್ದಾರೆ. ಅಲ್ಲದೆ  ನದಿಯಲ್ಲಿ ಹುಡುಕಾಟಕ್ಕೆ ಬೇಕಾದ ಎಲ್ಲಾ ಸಿದ್ದತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.ಅಲ್ಲದೆ ಶೋಧ ಕಾರ್ಯದ ಮಾಹಿತಿಯನ್ನು ಕಾಲ ಕಾಲಕ್ಕೆ ಪಡೆಯುತ್ತಿದ್ದಾರೆ.


ಘಟನಾ ಸ್ಥಳಕ್ಕೆ ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಹರೀಶ್ ಇಂಜಾಡಿಯವರು ಆಗಮಿಸಿ ವಿವಿಧ ಸಂಘ ಸಂಸ್ಥೆಗಳು ಜಾತಿ ಬೇಧ ಮರೆತು ನದಿಗೆ ಬಿದ್ದಿರುವ ಶಂಕೆ ಹಿನ್ನೆಲೆಯಲ್ಲಿ ಹುಡುಕಾಟದಲ್ಲಿ ತೊಡಗಿದ್ದಾರೆ.ಅವರಿಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.


ನೀರಿನ ಹರಿವು ಹೆಚ್ಚಳ:   ಕಳೆದೆರಡು ದಿನಗಳಿಂದ ಮುಳುಗು ತಜ್ಞ ಈಶ್ವರ ಮಲ್ಪೆ  ಅವರು ನದಿಯಲ್ಲಿ  ಹುಡುಕಾಟ ಮಾಡಿದರೂ ಯಾವುದೇ ಸುಳಿವು ಲಭಿಸಿಲ್ಲ. ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದಲ್ಲದೆ ಕೆಂಪು ಮಿಶ್ರಿತ ನೀರು ಬರುತ್ತಿರುವುದರಿಂದ ಹುಡುಕಾಟಕ್ಕೆ ತೊಂದರೆಯಾಗಿದೆ . ನೀರಿನ ಹೆಚ್ಚಳಕ್ಕೆ ಹೆಚ್ಚು ದೂರ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಬಗ್ಗೆಯೂ ಚರ್ಚೆಯಾಗುತ್ತಿದೆ.


ಘಟನೆ ಹಿನ್ನೆಲೆ:  ಜುಲೈ .22  ರಂದು ಅಂಬ್ಯಲೆನ್ಸ್‌ ಚಾಲಕ ಕೆಲಸಕ್ಕೆ ಮನೆಯಿಂದ  ಮುಂಜಾನೆ ಹೋಗಿದ್ದು  ಮೊಬೈಲ್‌ ಬಿಟ್ಟು ಹೋದ ಕಾರಣ ಆಸ್ಪತ್ರೆಯ ಸಿಬ್ಬಂದಿಯವರಿಗೆ ಫೋನ್‌ ಮಾಡಿ ಮನೆಯಲ್ಲಿಯೇ ಫೋನ್‌ ಬಿಟ್ಟು ಬಂದಿದ್ದು ಅವರಿಗೆ ತಿಳಿಸಿ ಎಂದು ಪತ್ನಿ ಹೇಳಿದ್ದರು. ನಂತರ ಆಸ್ಪತ್ರೆಯ ಸಿಬ್ಬಂದಿಗಳು  ರಜೆ ಹಾಕಿ ಆಸ್ಪತ್ರೆಯಿಂದ ಹೋಗಿರುವುದಾಗಿ ತಿಳಿಸಿದ್ದು  ಮದ್ಯಾಹ್ನ ವಾದರೂ ಮನೆಗೆ ಬಾರದೇ ಇರುವುದರಿಂದ ಆಸ್ಪತ್ರೆಗೆ ಪೋನ್‌ ಮಾಡಿ ವಿಚಾರಿಸಿದಾಗ ಆಸ್ಪತ್ರೆಯಲ್ಲಿಯೇ ಸ್ಕೂಟಿ ವಾಹನವನ್ನು ಬಿಟ್ಟು ಹೋಗಿರುವುದಾಗಿ ತಿಳಿಸಿದ್ದರು. ಪತ್ನಿ ಗಾಬರಿಗೊಂಡು  ವಿಷಯವನ್ನು ದೇವಸ್ಥಾನದಲ್ಲಿ ಕೆಲಸ ಮಾಡುವ ಎಲ್ಲರಿಗೂ ತಿಳಿಸಿದ್ದು,  ತನ್ನ  ಗಂಡ ಕಾಣೆಯಾದ ಬಗ್ಗೆ ಊರಿನ ಗ್ರಾಮಸ್ಥರಿಗೂ ತಿಳಿದು ಎಲ್ಲಾ ಕಡೆ ಹುಡುಕಾಟ ಮಾಡಿದರೂ ಪತ್ತೆಯಾಗಿರುವುದಿಲ್ಲ.  ನಂತರ ಸುಬ್ರಹ್ಮಣ್ಯ ಅಗ್ರಹಾರ ಸೋಮನಾಥೇಶ್ವರ ದೇವಸ್ಥಾನದ ಸಿಸಿ ಕ್ಯಾಮರವನ್ನು ಪರಿಶೀಲಿಸಿದಾಗ  ಕುಮಾರಧಾರ ನದಿ ಕಡೆಗೆ ಹೋಗುತ್ತಿರುವುದು ಕಂಡು ಬಂದಿದ್ದು, ನಂತರ ನದಿ ದಡದಲ್ಲಿ ಮತ್ತು ಸುತ್ತಮುತ್ತ ಹುಡುಕಾಟ ಮಾಡಿದರೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಪತಿಯನ್ನು   ಹುಡುಕಿ ಕೊಡುವಂತೆ ಪತ್ನಿಯ ದೂರಿನಲ್ಲಿ  ತಿಳಿಸಿದ್ದರು.


English Summary: Devaragadde, an employee of Subrahmanya Primary Health Center, has been missing for three days. SDRF teams are continuing search operations in the Kumaradhara River, suspecting he may have fallen in. Sullia MLA Bhagirathi Murulya visited the family, assuring support and directing the district administration to provide necessary arrangements for the search. Kukke Subrahmanya Temple Committee President Harish Injadi also visited the site and promised all required facilities. The search has been hampered due to increased water flow and muddy, reddish water in the river, raising concerns that Honappa may have been washed far downstream.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top