




ಕಡಬ ಟೈಮ್ಸ್(KADABA TIMES):ದ.ಕ ಜಿಲ್ಲೆಯಲ್ಲಿ ಸಂಜೆ ಆರು ಗಂಟೆವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು, ನಾಳೆಯಿಂದ ಮೂರು ದಿನಗಳ ಕಾಲ ರಾತ್ರಿ 9 ರ ನಂತರ ಎಲ್ಲಾ ಅಂಗಡಿ ವ್ಯವಹಾರ ಬಂದ್ ಮಾಡಿ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ಅಗಸ್ಟ್ 5 (ನಾಳೆ)ಯಿಂದ ಹೊಸ ನಿಯಮ ಜಾರಿಯಾಗಲಿದ್ದು ಎಲ್ಲ ವಾಣಿಜ್ಯ ವ್ಯವಹಾರಗಳು ರಾತ್ರಿ 9 ರ ನಂತರ ನಿರ್ಬಂಧಿಸಲಾಗಿದೆ. ಎಂದಿನಂತೆ 144 ಸೆಕ್ಷನ್ ಮುಂದುವರಿಯಲಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದ್ದಾರೆ. ಈ ನಿಯಮ ಮಂಗಳೂರು ನಗರಕ್ಕೆ ಕೂಡಾ ಅನ್ವಯವಾಗಲಿದೆ.