




ಕಡಬ ಟೈಮ್ಸ್(KADABA TIMES):ಈಗಾಗಲೇ ಎಡಿಜಿಪಿ ಅಲೋಕ್ ಕುಮಾರ್ ದ.ಕ ಜಿಲ್ಲೆಗೆ ಅನ್ವಯವಾಗುವಂತೆ ಸೂಚಿಸಿದ್ದ ದ್ವಿಚಕ್ರ ವಾಹನದ ಹೊಸ ನಿಯಮವನ್ನು ತಿದ್ದುಪಡಿಗೊಳಿಸಿ ಮಂಗಳೂರು ನಗರ ಪೊಲಿಸ್ ಆಯುಕ್ತ ಎನ್ ಶಶಿಕುಮಾರ್ ಮತ್ತೊಮ್ಮೆ ಹೊಸ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಅಸಮಾಧಾನಕ್ಕೆ ಮಣಿದ ಜಿಲ್ಲಾಡಳಿತ ಬೈಕ್ ಹಿಂಬದಿ ಪುರುಷ ಸವಾರನ ನಿರ್ಬಂಧ ಸಡಿಲಿಕೆ ಮಾಡಿದ್ದು ಆ ನಿಯಮವನ್ನು ಹಿಂತೆಗೆದುಕೊಳ್ಳಲಾಗಿದೆ ಎನ್ನುವ ಅಧಿಕೃತ ಮಾಹಿತಿಯನ್ನು ಈಗಾಗಲೇ ನೀಡಿದ್ದಾರೆ.