




ಕುಕ್ಕೆ ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾ.ಪಂ ಸಿಬ್ಬಂದಿಯೋರ್ವರನ್ನು ಕರ್ತವ್ಯ ಲೋಪ ಆಧಾರದಲ್ಲಿ ಮೂರು ತಿಂಗಳ ಹಿಂದೆ ಅಮಾನತಿಲ್ಲಿಟ್ಟಿದ್ದು ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಪ್ರಶ್ನಿಸಿ ಗ್ರಾಮಸ್ಥರು ಆ . 29 ಗ್ರಾ.ಪಂ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ವಿದ್ಯಮಾನ ನಡೆದಿದೆ.
ಗ್ರಾಮ ಪಂಚಾಯತ್ ಸಿಬ್ಬಂದಿ ಸಂತೋಪ್
ಅವರ ಮೇಲೆ
ಗ್ರಾ.ಪಂ ನ ಸ್ವತ್ತು
ಕಳವು ಆರೋಪ ಹೊರಿಸಿ
ಅಮಾನಲ್ಲಿಟ್ಟಿದ್ದರು. ಗ್ರಾಮ ಸಭೆಯಲ್ಲೂ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳದಂತೆ ನಿರ್ಣಯ ಮಾಡಲಾಗಿತ್ತು. ಹಾಗಿದ್ದೂ ಅವರು ನಮ್ಮ ಗ್ರಾ.ಪಂ ನಲ್ಲಿ ಮತ್ತೆ
ಕರ್ತವ್ಯ ದಲ್ಲಿ ಮುಂದುವರಿಯಬಾರದು. ಸಂತೋಷ್ ಮಾಡಿದ ಭ್ರಷ್ಟಾಚಾರವನ್ನು ಬೆಂಬಲಿಸಿದವರ ಮೇಲೆಯೂ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳ ಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸತೀಶ್ ಟಿ.ಎನ್, ಶೇಖರ್
ಅಂಬೆಕಲ್ಲು, ವೀಣಾನಂದ, ಪ್ರದೀಪ್ ಕೆ.ಎಲ್, ಉದಯ
ಶಿವಾಲ ಮತ್ತಿತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರ ತಿಭಟನಾ ನಿರತರು ಫಲಕ ಹಿಡಿದು ವ್ಯವಸ್ಥೆ ವಿರುದ್ದ ಘೋಷಣೆ ಕೋಗಿದರು. ಹಲವಾರು
ಮಂದಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.