




ಕಡಬ: ಕಡಬ ತಾಲೂಕಿನ ಎಡಮಂಗಲ ಮತ್ತು ಸವಣೂರು ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಬೀಸಿದ ಭೀಕರ ಬಿರುಗಾಳಿಗೆ ಅಪಾರ ಹಾನಿ ಸಂಭವಿಸಿದೆ.
ಮುಂಜಾನೆ 5.30ರ ವೇಳೆಗೆ ಬಾರೀ ಬಿರುಗಾಳಿ ಬೀಸಿದ್ದು ಪರಿಣಾನ ಎಡಮಂಗಲ ಗ್ರಾಮದ ಎಡಮಂಗಲ ಪೇಟೆ ಅಲಕ್ಕೆ, ಮುಳಿಯ, ಪಾದೆ ಸೇರಿದಂತೆ ವಿವಿಧೆಡೆ ಮನೆಗಳ ಮೇಲ್ಛಾವಣಿ, ಕೃಷಿ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ. ಬಿರುಗಾಳಿಯ ಭೀಕರತೆಗೆ ಎಡಮಂಗಲ ಗ್ರಾಮ ಪಂಚಾಯತ್ ಮೇಲ್ಛಾವಣಿ ಶೀಟು ಸುಮಾರು 200 ಮೀಟರ್ ದೂರಕ್ಕೆ ಹಾತಿ ಬಿದ್ದಿದೆ.
ಸವಣೂರು ಪರಿಸರದಲ್ಲಿ ಭೀಕರ ಗಾಳಿಯಿಂದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸವಣೂರು ಮೆಸ್ಕಾಂ ಉಪವಿ ಭಾಗದ ಸವಣೂರು ಗ್ರಾಮದ ಕೆಡೆಂಜಿ, ಆರೇಲ್ತಡಿ, ಕುದ್ಮನಮಜಲು ಪಟ್ಟೆ ಮಡಕೆ, ಕುದ್ಮಾರು ಗ್ರಾಮದ ಅನ್ಯಾಡಿ ಪರಿಸರದಲ್ಲಿ ಮರ ಬಿದ್ದು ಸುಮಾರು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಆರೇಲ್ತಡಿ ಕೊರಗಜ್ಜನ ಕಟ್ಟೆ, ದೈವಸ್ಥಾನದ ಪ್ರದೇಶ, ಹಲವರ ವಾಸದ ಮನೆಗಳು, ಅಡಿಕೆ ತೋಟ,ತೆಂಗಿನ ಮರಗಳು ಸೇರಿದಂತೆ ಲಕ್ಷಾಂತರ ನಷ್ಠ ಉಂಟಾಗಿದೆ.