ನಮ್ಮ ಕಡಬಕ್ಕೆ ಹೆಮ್ಮೆ : ಪ್ರವಿತ್ರ ಕುರಾನ್ ಅನ್ನು ಕೈಬರಹದಲ್ಲಿ ಬರೆದು 604 ಪುಟಗಳ ಈ ಕೃತಿ ರಚಿಸಿದ ಯುವತಿ

ನಮ್ಮ ಕಡಬಕ್ಕೆ ಹೆಮ್ಮೆ : ಪ್ರವಿತ್ರ ಕುರಾನ್ ಅನ್ನು ಕೈಬರಹದಲ್ಲಿ ಬರೆದು 604 ಪುಟಗಳ ಈ ಕೃತಿ ರಚಿಸಿದ ಯುವತಿ

Kadaba Times News
0

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್ ಇಸ್ಮಾಯಿಲ್ ಅವರು ಕುರಾನ್ ೩೦ ಕಾಂಡಗಳನ್ನು ಕೈಯಲ್ಲಿ ಬರೆದು ಗಮನ ಸೆಳೆದಿದ್ದಾರೆ.



ಕಡಬ  ತಾಲೂಕಿನ ಬೈತಡ್ಕದ ಇಸ್ಮಾಯಿಲ್ ಹಾಜಿ ಮತ್ತು ಝಕ್‌ರಾ ಜಾಸ್ಮಿನ್ ದಂಪತಿಯ ಪುತ್ರಿ ಸಜ್‌ಲ ಅವರು ಈ ಸಾಧನೆ ಮಾಡಿದ್ದಾರೆ. ಕುರಾನ್ ಬರವಣಿಗೆಯನ್ನು 2021ರ ಜನವರಿಯಲ್ಲಿ ಆರಂಭಿಸಿದ್ದ ಅವರು 2025ರ ಆಗಸ್ಟ್ ನಲ್ಲಿ ಪೂರ್ಣಗೊಳಿಸಿದ್ದಾರೆ.


ಸಜ್‌ಲ ಅವರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಜಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಅವರು ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.

ಒಟ್ಟು 604 ಪುಟಗಳ ಈ ಕೃತಿಗೆ ಬಿಳಿ, ತಿಳಿನೀಲಿ, ತಿಳಿ ಹಸುರು ಬಣ್ಣದ ಕಾಗದವನ್ನು ಬಳಸಿದ್ದಾರೆ. ಆಕರ್ಷಕವಾದ ಕೆಂಪು ಮತ್ತು ಸ್ವರ್ಣ ವರ್ಣದ ಹೊರ ಕವಚವನ್ನು ಹೊದಿಸಲಾಗಿದೆ. ಈ ಕೃತಿಯು ಸುಮಾರು 14 ಕೆ.ಜಿ. ತೂಕ ಇದೆ.


"ಒಂದು ಪುಟ ಬರೆಯಲು ನನಗೆ ಸುಮಾರು ನಾಲ್ಕು ಗಂಟೆ ಬೇಕಾಗುತ್ತಿತ್ತು. ಕೆಲವು ದಿನಗಳಲ್ಲಿ 8 ಗಂಟೆ ಬಳಸಿ 2 ಪುಟಗಳನ್ನು ಬರೆಯಲು ಸಾಧ್ಯವಾಯಿತು. ಒಟ್ಟಾರೆ ಸಂಪೂರ್ಣ ಕುರಾನ್ ಅನ್ನು ಒಟ್ಟು 303 ದಿನಗಳಲ್ಲಿ ಬರೆದು ಮುಗಿಸಿದ್ದೇನೆ. ಕುರಾನ್ ಅನ್ನು ಬರೆದು ಮುಗಿಸಲು 2,416 ಗಂಟೆ ಬಳಕೆಯಾಗಿದೆ" ಎಂದು ಸಜ್‌ಲ ತಿಳಿಸಿದ್ದಾರೆ.


ಈ ಕೃತಿಯನ್ನು ಶನಿವಾರ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಕೇರಳದ ಮರ್ಕಝ್ ನಾಲೇಜ್ ಸಿಟಿಯ ಮುರ್ ರಿಸ್ ಯಾಸೀನ್ ಸಖಾಫಿ ಅಲ್ ಅಝ್ಹರಿ ಅವರು ಲೋಕಾರ್ಪಣೆಗೊಳಿಸಿದರು.

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top