




ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ . ಈ ಪ್ರಕರಣ (Complaint) ರಾಜ್ಯಾದ್ಯಂತ ಭಾರೀ ಸದ್ದು ಮಾಡ್ತಿದ್ದಂತೆ ಎಲ್ಲರ ಕಣ್ಣು ಧರ್ಮಸ್ಥಳದತ್ತ ನೆಟ್ಟಿತ್ತು. ಭಾನುವಾರ ರಾಜ್ಯ ಬಿಜೆಪಿ ನಾಯಕರೆಲ್ಲ ಧರ್ಮಸ್ಥಳಕ್ಕೆ ತೆರಳಿದ್ದರು.
ಮುಂದುವರಿದು
ಇಂದು ಸದನದಲ್ಲಿ ಬಿಜೆಪಿ ನಾಯಕರೆಲ್ಲ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿ’ (Mahesh Shetty
Thimarody) ಎಂದು ಮುಗಿಬಿದ್ದರು. ಅಷ್ಟೇ
ಅಲ್ಲ, ವಿಪಕ್ಷ ನಾಯಕ ಆರ್ ಅಶೋಕ್ ಅವರು, ‘ಮಹೇಶ್ ತಿಮರೋಡಿ ಎಂಬ ವ್ಯಕ್ತಿ ಸಿಎಂ ಅನ್ನೇ ಕೊಲೆಗಾರ ಅಂತಾನೆ. ಸಿಎಂ
ಏನು 28 ಕೊಲೆ ಮಾಡಿದ್ದಾರೆ ಎಂದುಕೊಳ್ಳಬೇಕಾ? ಸಿಎಂ ಕೊಲೆ ಗಡುಕಾ ಅಂತಾ ಹೇಳಬೇಕಾ? ಈ ಸರ್ಕಾರಕ್ಕೆ ಕಿವಿನೂ
ಇಲ್ಲ, ಕಣ್ಣು ಇಲ್ಲ. ಡಿಸಿಎಂ ಹೊರಗಡೆ ಮಾತಾಡ್ತಿದ್ದಾರೆ. ಇಲ್ಲಿ ಮಾತಾಡಿ ಆಗ್ರಹಿಸಿದ್ದರು.
ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರೇನೋ ‘ನಮ್ಮ ಸರ್ಕಾರ ಯೂಸ್ ಲೆಸ್ ಆಗಿದೆ ಅಂದುಕೊಂಡಿದ್ದೀರಾ? ಆ ವ್ಯಕ್ತಿಯ (ಮಹೇಶ್ ಶೆಟ್ಟಿ ತಿಮರೋಡಿ) ವಿರುದ್ಧ ಅನೇಕ ಪ್ರಕರಣಗಳಿವೆ. ಕಾನೂನು ರೀತಿಯಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು. ಆದರೆ ಈಗ ಬಿಜೆಪಿಗೆ ತಾನು ಬಿಟ್ಟ ಬಾಣವೇ ತಿರುಗಿ ಹೊಡೆಯಲು ಆರಂಭಿಸಿದೆ.
ಯಾಕೆಂದರೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸ್ವತಃ ಸಿದ್ದರಾಮಯ್ಯ ಕೊಲೆಗಾರ
ಎಂದು ಹೇಳಿಲ್ಲ. ಕಳೆದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಈಗಿನ
ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರೇ ಖುದ್ದು ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ಕೊಲೆಗಾರ
ಎಂದು ಹೇಳಿದ್ದರು. ಹರೀಶ್ ಪೂಂಜಾರ ಆ ಹೇಳಿಕೆಯನ್ನು ಉಲ್ಲೇಖಿಸಿ
ಸುದ್ದಿಗೋಷ್ಠಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಸಿದ್ದರಾಮಯ್ಯ ಮತ್ತು
ಪೂಂಜಾ ವಿರುದ್ಧ ಕಿಡಿಕಾರಿದ್ದರು.
ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದೇನು?: ಹರೀಶ್ ಪೂಂಜಾ ನೀಡಿದ ಇದೇ ಹೇಳಿಕೆಯನ್ನು ಉಲ್ಲೇಖಿಸಿ ಹಿಂದೂ ಮುಖಂಡ, ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡು ಅವರು, ‘ನಮ್ಮ ಶಾಸಕ ಹರೀಶ್ ಪೂಂಜಾ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾನು ಹೇಳೋದು ಇದು ನಿಜ ಆದ್ರೆ ಸಿದ್ದರಾಮಯ್ಯ ಸಿಎಂ ಪದವಿಗೆ ರಾಜೀನಾಮೆ ನೀಡಿ ಹೋಗ್ಬೇಕು. ಈ ಆರೋಪ ಸುಳ್ಳಾದ್ರೆ ಶಾಸಕ ಹರೀಶ್ ಪೂಂಜಾ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದರು. ಇದೇ ಹೇಳಿಕೆಯನ್ನು ಇಂದು ಸದನದಲ್ಲಿ ಉಲ್ಲೇಖಿಸಿದ ಬಿಜೆಪಿ ಶಾಸಕರು ಮಹೇಶ್ ಶೆಟ್ಟಿ ತಿಮರೋಡಿ ಈ ಹೇಳಿಕೆಯನ್ನು ಹೇಳಿದ್ದು, ಆ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಹೇಶ್ ಶೆಟ್ಟಿ ತಿಮರೋಡಿ , ಅದು ನನ್ನ ಹೇಳಿಕೆಯಲ್ಲ, ನಮ್ಮ ಶಾಸಕ ಹೇಳಿದ್ದನ್ನು ಹೇಳಿದ್ದೇನೆ. ನಮ್ಮ ಶಾಸಕರು ಹೇಳಿದ್ದೇ ನಮಗೆ ಸತ್ಯ. ಶಾಸಕ ನೀಡಿದ ಹೇಳಿಕೆ ಸುಳ್ಳಾದರೆ ಅವನನ್ನು ಬಂಧಿಸಿ ನಿಮ್ಮ ಹಿಂದಗಡೆನೇ ಕುಳಿತಿದ್ದಾನಲ್ಲ? ನೀವೆಲ್ಲ ಜನಪ್ರತಿನಿಧಿಗಳಾಗೋಕೆ ನಾಲಾಯಕ್, ನಿಮ್ಮನ್ನೆಲ್ಲ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಕೆಲಸಕ್ಕೆ ಹಾಕಬೇಕು, ಅಲ್ಲಿ ಜನ ಕಡಿಮೆ ಇದ್ದಾರೆ, ಗೃಹ ಸಚಿವರು ಕೂಡ ತನ್ನ ಹುದ್ದೆ ನಿರ್ವಹಿಸಲು ನಾಲಾಯಕ್ ಇದ್ದಾರೆ, ನೀವೆಲ್ಲ ಪಾಪಿಷ್ಟರು ಸತ್ಯದ ಪರ ಮಾತಾಡಿದವರನ್ನು ಬಿಟ್ಟು ಸುಳ್ಳಿನ ಪರ ಇರುವವರು ಪರ ನಿಂತಿದ್ದೀರಿ ಎಂದು ಕಿಡಿಕಾರಿದರು.