




ಕಡಬ: ಇಲ್ಲಿನ ತಹಶೀಲ್ದಾರ್ ಕಚೇರಿ ಸಮೀಪದ ಶ್ರೀ ಗಣೇಶ್ ಬಿಲ್ಡಿಂಗ್ ನಲ್ಲಿ ಅರ್ಪಿತಾ ಅನಿಲ್ ರೈ ಮಾಲಕತ್ವದ ಪ್ರಥಮ ಮಹಿಳಾ ನೂತನ ವಕೀಲರ ಕಚೇರಿ ಮಾಲೇಶ್ವರ ಲಾ ಚೆಂಬರ್ ಆ.29 ರಂದು ಉದ್ಘಾಟಿಸಲಾಯಿತು.
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಪುತ್ತೂರು ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಯುವ ವಕೀಲೆ ಕಡಬದಲ್ಲಿ ವೃತ್ತಿ ಜೀವನ ಪ್ರಾರಂಭಿಸಿರುವುದು ಸಂತೋಷದ ಸಂಗತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಾನೂನು ಸೇವೆಗಳನ್ನು ಸಮರ್ಪಿತ ಮನೋಭಾವದಿಂದ ನೀಡುವುದು ಸಮಾಜಕ್ಕೆ ಅತ್ಯಂತ ಅಗತ್ಯ ಎಂದು ಶುಭ ಹಾರೈಸಿದರು .
ಹಿರಿಯ ನ್ಯಾಯವಾದಿ ಮನೋಹರ ಸಬಳೂರು, ಪುತ್ತೂರು ತಾ.ಪಂ ಮಾಜಿ ಅಧ್ಯಕ್ಷೆ ಪುಲಾಸ್ತ್ಯ ರೈ, ಕಟ್ಟಡ ಮಾಲಕರದ ಸುಂದರ ಗೌಡ ಮಂಡೇಕರ ಅತಿಥಿಗಳಾಗಿ ಭಾಗವಹಿಸಿದರು . ಈ ಸಂದರ್ಭದಲ್ಲಿ ಕಮಲ ಬೇಬಿ ರೈ ಮಾಲೆಶ್ವರ, ಸರಸ್ವತಿ ರಾಧಕೃಷ್ಣ ಬೆಳ್ಳಾರೆ, ವೇಣುಗೋಪಾಲ್ ರೈ ಪಿಜಕ್ಕಳ, ಅಶ್ವಿನಿ ಸತೀಶ್ ರೈ ಮಡಿಕೇರಿ, ಪುನೀತ್, ಅಕ್ಷಯ್, ಅಜಯ್ ಮೈಪಾಜೆ ಉಪಸ್ಥಿತರಿದ್ದರು. ಅರ್ಪಿತಾ ಅನಿಲ್ ರೈ ಅತಿಥಿಗಳನ್ನು ಬರ ಮಾಡಿಡಿಕೊಂಡರು.