




ಕಡಬ ಟೈಮ್ಸ್ (ಪ್ರಮುಖ ಸುದ್ದಿ): ವರದಿಗೆ ತೆರಳಿದ್ದ ಮೂವರು ಯೂಟ್ಯೂಬರ್ಗಳ ಮೇಲೆ 50ಕ್ಕೂ ಹೆಚ್ಚು ಜನರ ಗುಂಪೊಂದು ಭಾನುವಾರ ಇಲ್ಲಿನ ಧರ್ಮಸ್ಥಳ-ಪಾಂಗಾಳ ರಸ್ತೆ ಸಮೀಪ ಮಾರಣಾಂತಿಕ ಹಲ್ಲೆ ನಡೆಸಿದೆ ಬಗೆ ವರದಿಯಾಗಿದೆ. ಹಲ್ಲೆಯಿಂದ ಗಾಯಗೊಂಡ ಯೂಟ್ಯೂಬರ್ಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಸಂಚಾರಿ
ಸ್ಟುಡಿಯೋ’, ‘ಯುನೈಟೆಡ್ ಮೀಡಿಯಾ’ ಹಾಗೂ ‘ಕುಡ್ಲ ರಾಂಪೇಜ್’ ಯೂಟ್ಯೂಬ್ ಚಾನೆಲ್ ಗಳ ವರದಿಗಾರರು ಹಲ್ಲೆಗೊಳಗಾದವರು.
ಬಿಗ್
ಬಾಸ್ ಖ್ಯಾತಿಯ ರಜತ್ ಅವರು 12 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯ ಮನೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಚಿತ್ರೀಕರಿಸಲು ಪಾಂಗಾಳ ತಿರುವಿನಲ್ಲಿ ಕಾಯುತ್ತಿದ್ದಾಗ, ಏಕಾಏಕಿ ಬಂದ 50ಕ್ಕೂ ಹೆಚ್ಚು ಜನರ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.
ಈ
ಸಂದರ್ಭದಲ್ಲಿ ದುಷ್ಕರ್ಮಿಗಳು ಯೂಟ್ಯೂಬರ್ಗಳ ಬಳಿಯಿದ್ದ ಕ್ಯಾಮೆರಾವನ್ನು ಸಂಪೂರ್ಣವಾಗಿ ಪುಡಿಗಟ್ಟಿ, ನಾಶಪಡಿಸಿದ್ದಾರೆ ಎಂದೂ ಗಾಯಾಳುಗಳು ಆರೋಪಿಸಿದ್ದಾರೆ.
2 ದಶಕಗಳ ಕಾಲ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತ ದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕನೊಬ್ಬ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಸರಕಾರ ರಚಿಸಿರುವ ಎಸ್ ಐಟಿ ಕಳೆದ 8 ದಿನಗಳಿಂದ ಉತ್ಖನನ ಕಾರ್ಯ ಮಾಡುತ್ತಿದೆ, ಈ ಮೂರು ಯೂಟ್ಯೂಬ್ ಚಾನೆಲ್ ಗಳು ಇದರ ವರದಿಯನ್ನು ನಿರಂತರವಾಗಿ ಮಾಡುತ್ತಿದ್ದವು.