ಕೋಡಿಂಬಾಳ ರೈಲು ನಿಲ್ದಾಣದಲ್ಲಿ ದೊಂದಿಗೆ ಮುಕ್ತಿ: ಬಂತು ಕರೆಂಟ್, ಉರಿಯಿತು ಲೈಟು!

ಕೋಡಿಂಬಾಳ ರೈಲು ನಿಲ್ದಾಣದಲ್ಲಿ ದೊಂದಿಗೆ ಮುಕ್ತಿ: ಬಂತು ಕರೆಂಟ್, ಉರಿಯಿತು ಲೈಟು!

Kadaba Times News
0

ಕಡಬ:  ಕಡಬ ತಾಲೂಕು ಕೇಂದ್ರದಿಂದ ಮೂರು ಕಿ.ಮೀ ದೂರದಲ್ಲಿರುವ ಪ್ರಮುಖ  ಕೋಡಿಂಬಾಳ ರೈಲ್ವೆ ನಿಲ್ದಾಣದಲ್ಲಿ ದೊಂದಿ ಬೆಳಕಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮತ್ತು ಫ್ಲಾಟ್ ಫಾರ್ಮ್ ನಲ್ಲಿ ದೊಂದಿ ಬೆಳಕು ಉರಿಯುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮತ್ತು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡಿದ್ದಾರೆ.



ಕನಿಷ್ಠ  ಮೂಲ ಸೌಕರ್ಯ ಒದಗಿಸಿದ ಹಿನ್ನೆಲೆ  ಸಾರ್ವಜನಿಕರು ಜನಪ್ರತಿನಿಧಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ಕಡಬ ಟೈಮ್ಸ್ ವೆಬ್ ತಾಣವು  “ಕೋಡಿಂಬಾಳ ರೈಲು ನಿಲ್ದಾಣದಲ್ಲಿ ದೊಂದಿ ಬೆಳಕಿನಲ್ಲಿ ಟಿಕೆಟ್ ವಿತರಣೆ” ಶೀರ್ಷಿಕೆಯಡಿಯಲ್ಲಿ ಸಮಗ್ರ ವರದಿ ಪ್ರಕಟಿಸಿತ್ತು.    ಈ ಎಲ್ಲಾ ಬೆಳವಣಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಿರುವ ಚರ್ಚೆ ರೈಲ್ವೇ ಅಧಿಕಾರಿಗಳಿಗೆ ಮುಟ್ಟಿತ್ತು  ಬೆಳಕಿನ ವ್ಯವಸ್ಥೆಗಾಗಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು ಇದರ ಕೆಲಸ ಪ್ರಗತಿಯಲ್ಲಿದೆ.  ಶೀಘ್ರದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ರೈಲ್ವೇ ಇಲಾಖೆ ಎಕ್ಸ್ (X)ಮೂಲಕ ಉತ್ತರಿಸಿತ್ತು.


ಇದೀಗ ಆ.29 ರಂದು ರೈಲ್ವೇ ಅಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಟಿಕೆಟ್ ನೀಡುವ ಕೌಂಟರ್ ಮತ್ತು ಫ್ಲಾಟ್ ಫಾರ್ಮ್ ನಲ್ಲಿ ವಿದ್ಯುತ್ ದೀಪ ಉರಿಯುತ್ತಿದೆ. ಈ ಬೆಳಕಿನ ವ್ಯವಸ್ಥೆಯಿಂದ ಪ್ರಯಾಣಿಕರು ಸಂತಸಗೊಂಡಿದ್ದು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದ ಸಮಯದಲ್ಲಿ, ಸಾಮಾನ್ಯವಾಗಿ ಯಾರಾದರೂ ಸೇವೆಯನ್ನು ನಿಲ್ಲಿಸುವುದು ಸಹಜ. ಆದರೆ ಆ ನಿಲ್ದಾಣದ ಟಿಕೆಟ್ ಏಜೆಂಟ್ ತಮ್ಮ ಕರ್ತವ್ಯವನ್ನು ಅಡ್ಡಿಪಡಿಸದೆ ಮುಂದುವರೆಸಿದ್ದು ತನಗೆ ಇದ್ದ ಜವಾಬ್ದಾರಿಯನ್ನು ದೀಪದ ಬೆಳಕಿನಲ್ಲಿ ಕಾರ್ಯನಿರ್ವಹಿಸಿದ್ದು ಶ್ಲಾಘನೀಯ ಎಂದು ಸಾಮಾಜಿಕ ಹೋರಾಟಗಾರ  ವಿನಯ ಚಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

 

2023-24ರ ಸಾಲಿನಲ್ಲಿ ಪ್ಲಾಟ್‌ಫಾರ್ಮ್ ನಂ. 1ರಲ್ಲಿ 450 ಮೀಟರ್‌ಗಳ ಉನ್ನತ ಮಟ್ಟದ ಫ್ಲಾಟ್‌ಫಾರ್ಮ್ ಹಾಗೂ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ರೈಲ್ವೇ ಇಲಾಖೆ ಈ ಹಿಂದೆ ಮಾಹಿತಿ ನೀಡಿತ್ತು. ಅದರಂತೆ  ಕಾಮಗಾರಿ ಆರಂಭವಾದರೂ ನಿರೀಕ್ಷಿತ  ಮಟ್ಟದಲ್ಲಿ ಪೂರ್ಣಗೊಂಡಿಲ್ಲ. ಮಂಗಳೂರು- ಹಾಸನ ರೈಲು ಮಾರ್ಗದಲ್ಲಿರುವ ಕೋಡಿಂಬಾಳದಲ್ಲಿ ಮಾತ್ರವಲ್ಲದೆ ಕಾಣಿಯೂರಿನಲ್ಲಿ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ 450 ಮೀಟರ್ ಉದ್ದದ ಫ್ಲಾಟ್‌ಫಾರ್ಮ್‌ ಮತ್ತು ಎಡಮಂಗಲ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ -1 ರಲ್ಲಿ 560 ಮೀಟರ್‌ ಉದ್ದದ ಉನ್ನತ ಮಟ್ಟದ ಪ್ಲಾಟ್‌ಫಾರ್ಮ್, ಆಸನ ವ್ಯವಸ್ಥೆಗಳು, ನೀರಿನ ವ್ಯವಸ್ಥೆ, 60 ಚದರ ಮೀಟರ್ ಪ್ಲಾಟ್‌ಫಾರ್ಮ್ ಶೆಲ್ಟರ್ ಮತ್ತು ಬೆಳಕಿನ ಸೌಲಭ್ಯ ಕಲ್ಪಿಸಲು ಮುಂದಾಗಿತ್ತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top