




ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವು ವಾರ್ಡುಗಳಲ್ಲಿ ಬೀದಿ ನಾಯಿಗಳ ಅಲೆದಾಟ ಹೆಚ್ಚಾಗಿದೆ .ಈ ನಡುವೆ ವಿದ್ಯಾನಗರ ಬಳಿ ವ್ಯಕ್ತಿಯೋರ್ವರಿಗೆ ಬೀದಿಯಲ್ಲಿ ಅಲೆದಾಡುತ್ತಿದ್ದ ಹುಚ್ಚು ನಾಯಿ ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊರಗಪ್ಪ ಗೌಡ ಆದ್ರ ಎಂಬವರಿಗೆ ಆ.29 ಹುಚ್ಚುನಾಯಿ ಕಚ್ಚಿದ್ದು ಕೂಡಲೇ
ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕೊಂಡೊಯ್ಯುವಂತೆ ವೈದ್ಯರು ಸೂಚಿಸಿರುವುದಾಗಿ ತಿಳಿದು ಬಂದಿದೆ. ಘಟನೆ
ತಿಳಿದು ಆಸ್ಪತ್ರೆಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಪ.ಪಂ ಸದಸ್ಯ ಹನೀಫ್ ಕೆ.ಎಂ. ಸೇರಿದಂತೆ
ಹಲವಾರು ಮಂದಿ ತೆರಳಿ ವಿಚಾರಿಸಿದ್ದಾರೆ.
ಕೋಡಿಂಬಾಳ ವ್ಯಾಪ್ತಿಯಲ್ಲಿ ಹಲವು ಸಾಕುನಾಯಿಗಳಿಗೆ
ಈ ಬೀದಿ ನಾಯಿ ಕಚ್ಚಿರುವುದಾಗಿ ಮಾಹಿತಿ ಲಭಿಸಿದೆ. ಹುಚ್ಚು ನಾಯಿ ಅಲೆದಾಟದ ಸುದ್ದಿ ತಿಳಿದು ಜನರು
ಈಗ ಆತಂಕ ಗೊಂಡಿದ್ದಾರೆ.
ಇಂದು (ಆ.30) ಸಾಕು ನಾಯಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ: ಹುಚ್ಚು ನಾಯಿ ಕಚ್ಚಿ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಬೆನ್ನಲ್ಲೇ ಪ.ಪಂ ಎಚ್ಚೆತ್ತುಕೊಂಡಿದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹುಚ್ಚು ನಾಯಿ ಕಡಿತಕ್ಕೆ ಒಳಗಾದ ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂದು (ದಿನಾಂಕ 30-08-2025ನೇ ಶನಿವಾರ) ಸರಸ್ವತಿ ವಿದ್ಯಾಲಯದ ಬಳಿ ವಿದ್ಯಾನಗರ ಕೋಡಿಂಬಾಳ ಪೂರ್ವಾಹ್ನ -09-30 ಗಂಟೆಯಿಂದ, ಕೋಡಿಂಬಾಳ ಪುಳಿಕುಕ್ಕು ಅಂಗನವಾಡಿ ಕೇಂದ್ರ ಅಜ್ಜಿಕಟ್ಟೆ ಬಳಿ ಪೂರ್ವಾಹ್ನ -11-00 ಗಂಟೆಯಿಂದ, ಕೋಡಿಂಬಾಳ ಪೇಟೆಯ ಬಸ್ಸು ತಂಗುದಾಣದ ಬಳಿ ಅಪರಾಹ್ನ 12-30 ರಿಂದ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿ ಕೊಂಡಿದೆ. ಅವಶ್ಯಕತೆ ಇ ರುವ ಸಾರ್ವಜನಿಕರು ತಮ್ಮ ಸಾಕು ನಾಯಿಗಳನ್ನು ಲಸಿಕೆ ನೀಡುವ ಸ್ಥಳಗಳಿಗೆ ತಂದು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪ.ಪಂ ಅಧಿಕಾರಿಗಳು ಮತ್ತು ಪಶು ವೈಧ್ಯಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಸುರಕ್ಷತೆ ಇಲ್ಲದೆ ಆತಂಕ: ಬೀದಿ
ನಾಯಿಗಳನ್ನು ಪಟ್ಟಣ ಪಂಚಾಯಿತಿಯವರೇ ಸಾಕುತ್ತಿದ್ದಾರೇನೋ ಎಂಬಮಟ್ಟಿಗೆ ಯಾವುದೇ ಭಯವಿಲ್ಲದೇ ಬೀದಿ ನಾಯಿಗಳು ಹಿಂಡುಗಟ್ಟಿ ರಾಜಾರೋಷವಾಗಿ ಓಡಾಡುತ್ತವೆ. ಎಲ್ಲೆಂದರಲ್ಲಿ ಬಿಸಾಡಿದ ಮಾಂಸದ ತುಂಡು, ಹೋಟೆಲ್ ಮಾಂಸ ತ್ಯಾಜ್ಯದ ರುಚಿ ಕಂಡ ನಾಯಿಗಳು ಮುಖ್ಯ ಪೇಟೆಯಲ್ಲಿ ಅತೀ ಹೆಚ್ಚು
ಓಡಾಡುತ್ತಿದೆ. ಆಸ್ಪತ್ರೆಗೆ, ತಹಶೀಲ್ದಾರ್ ಕಚೇರಿ,ಕೆಲ ಶಾಲಾ ಆವರಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿ
ಕಂಡು ಬರುತ್ತಿದೆ. ಬೆಳಗ್ಗೆ ಶಾಲೆಗೆ ಹೋಗುವ ಮಕ್ಕಳು, ವಾಕಿಂಗ್‌ಗೆ ಹೋದವರು, ಪಾದಚಾರಿಗಳು
ಸುರಕ್ಷಿತವಾಗಿ ನಡೆದಾಡಲು ಸಾಧ್ಯವಿಲ್ಲದಂತಾಗಿದೆ
ಕ್ರಮ ಕೈಗೊಳ್ಳದ ಪಪಂ: ಬೀದಿ ನಾಯಿ ನಿಯಂತ್ರಣಕ್ಕೆ ಪಪಂನವರು ಯಾವುದೇ ಕ್ರಮ ಕೈಗೊಂಡಿಲ್ಲ. ತಾಲೂಕಾಡಳಿತ ಕೂಡ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಈ
ಹಿಂದೆ ಬೀದಿ ನಾಯಿಗಳ ಉಪಟಳದ ಬಗ್ಗೆ ವರದಿಗಳು ಪ್ರಕಟವಾಗಿದ್ದರೂ ಯಾವುದೇ ಕ್ರಮ ಜನರುಗಿಸಿರುವುದು
ಕಂಡು ಬಂದಿಲ್ಲ . ಕಡಬ ಭಾಗದಲ್ಲಿ
ಬೀದಿ ನಾಯಿಗಳ ಹೆಚ್ವಿದ್ದು ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ನಾಯಿಗಳ
ಉಪಟಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.