ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಎಂದರೇನು?ಇಲ್ಲಿದೆ ಪೂರ್ಣ ಮಾಹಿತಿ

ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಎಂದರೇನು?ಇಲ್ಲಿದೆ ಪೂರ್ಣ ಮಾಹಿತಿ

Kadaba Times News

 ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ(ಎಸ್ಐಟಿ) ಕಳೆದ ಎರಡು ವಾರಗಳಿಂದ ನಡೆಸುತ್ತಿರುವ ತನಿಖೆಯ ಭಾಗವಾಗಿ ದೂರುದಾರ ಗುರುತಿಸಿರುವ ಪಾಯಿಂಟ್ ನಂಬರ್ 13ರಲ್ಲಿ ಇಂದು ಶೋಧ ಕಾರ್ಯ ನಡೆಯಲಿದೆ.  ಭಾರೀ ಕುತೂಹಲ ಮೂಡಿಸಿದ್ದ ಪಾಯಿಂಟ್ ನಂಬರ್ 13ರಲ್ಲಿ ದೂರುದಾರ ಒಂದಕ್ಕಿಂತ ಹೆಚ್ಚು ಮೃತ ದೇಹಗಳನ್ನು ಹೂತು ಹಾಕಿರುವುದಾಗಿ ಆರೋಪಿಸಿದ್ದ. ಅಲ್ಲದೇ ದೂರುದಾರ ಈ ವರೆಗೆ ಗುರುತಿಸಿದ್ದ ಹೆಚ್ಚಿನ ಸ್ಥಳಗಳಲ್ಲಿ ಯಾವುದೇ ಮಾನವ ಅವಶೇಷಗಳು ಪತ್ತೆಯಾಗಿರಲಿಲ್ಲ. ಇಲ್ಲೂ ರಾಡಾರ್ ಬಳಸಿ ಶೋಧ ಕಾರ್ಯ ನಡೆಸಿದಾಗ ಕುರುಹು ಪತ್ತೆಯಾದರೆ ಮಾತ್ರ ಉತ್ಖನನ ನಡೆಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಎಸ್ಐಟಿ ಇಳಿದಿದೆ.

 https://today.kadabatimes.in/news/geophysical-method-used-to-detect-objects-beneath-the-earth


ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಎಂದರೇನು?: 

ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಎನ್ನುವುದು ಭೂಮಿಯ ಮೇಲ್ಮೈಯ ಕೆಳಗಿರುವ ವಸ್ತುಗಳನ್ನು ಪತ್ತೆಹಚ್ಚಲು ಬಳಸುವ ಒಂದು ಭೌಗೋಳಿಕ ವಿಧಾನವಾಗಿದೆ. ಇದು ರೇಡಿಯೋ ತರಂಗಗಳನ್ನು ಬಳಸಿ ಭೂಮಿಯೊಳಗಿನ ಚಿತ್ರಗಳನ್ನು ರಚಿಸುತ್ತದೆ. ಇದು ಅಪಾಯಕಾರಿಯಲ್ಲದ ಮತ್ತು ಅಡಚಣೆಯನ್ನುಂಟು ಮಾಡದ ತಂತ್ರಜ್ಞಾನವಾಗಿದ್ದು, ಯಾವುದೇ ಅಗೆತ ಅಥವಾ ಉತ್ಖನನ ಮಾಡದೆಯೇ ಭೂಗತ ಪ್ರದೇಶಗಳನ್ನು ಸಮೀಕ್ಷೆ ಮಾಡಬಹುದು.

GPR ವ್ಯವಸ್ಥೆಯು ಭೂಮಿಯೊಳಗೆ ತರಂಗಗಳನ್ನು ಕಳುಹಿಸುತ್ತದೆ ಮತ್ತು ಪ್ರತಿಫಲನಗೊಂಡು ಹಿಂದಿರುಗುವ ಸಂಕೇತಗಳನ್ನು ವಿಶ್ಲೇಷಿಸುತ್ತದೆ. ಮೂಲಕ ಅಲ್ಲಿಮ ಸ್ಪಷ್ಟ ಮಾಹಿತಿಗಳನ್ನು ಚಿತ್ರಣಗಳ ಮೂಲಕ ರವಾನಿಸುತ್ತದೆ. ವಿದ್ಯುತ್ಕಾಂತೀಯ ತರಂಗಗಳು ಭೂಮಿಯೊಳಗೆ ಚಲಿಸುತ್ತವೆ. ತರಂಗಗಳು ವಿಶ್ಲೇಷಿಸುವ ಮೂಲಕ, GPR ವ್ಯವಸ್ಥೆಯು ಭೂಮಿಯೊಳಗಿನ ವಿವರವಾದ ಚಿತ್ರ ಅಥವಾ ಪ್ರೊಫೈಲ್ ಅನ್ನು ರಚಿಸುತ್ತದೆ. ಮತ್ತು ಮಾಹಿತಿಯನ್ನು ಸಂಸ್ಕರಿಸಿ ಸಾಮಾನ್ಯವಾಗಿ 2D ಅಡ್ಡ-ವಿಭಾಗದ ಚಿತ್ರ ಅಥವಾ 3D ಮಾದರಿಯಾಗಿ ಪ್ರದರ್ಶಿಸಲಾಗುತ್ತದೆ. ಚಿತ್ರವು ವಿವಿಧ ಭೂಗತ ವಸ್ತುಗಳ ಸ್ಥಳ, ಆಳ ಮತ್ತು ಆಕಾರವನ್ನು ತೋರಿಸುತ್ತದೆ, ಇದರಿಂದಾಗಿ ಆಪರೇಟರ್ಗಳು ಭೂಮಿಯನ್ನು ಅಗೆಯದೆಯೇ ಅದರ ಒಳಗಿರುವ ವಸ್ತುಗಳನ್ನು ನೋಡಬಹುದು.

 

ಎಲ್ಲೆಲ್ಲಿ ಜಿಪಿಆರ್ ಬಳಸಲಾಗುತ್ತದೆ

ಜಿಪಿಆರ್ ನ್ನು ತೈಲ, ಗಣಿ ನಿಕ್ಷೇಪಗಳನ್ನು ಪತ್ತೆ ಹಚ್ಚಲು, ನಿರ್ಮಾಣ ಮತ್ತು ಇಂಜಿನಿಯರಿಂಗ್ ಸಂದರ್ಭದಲ್ಲಿ ಅಲ್ಲಿನ ಪೈಪ್ ಗಳು, ಕೇಬಲ್ ಗಳು ಮತ್ತು ತಂತಿಗಳಂತಹ ಭೂಗತ ಸೌಲಭ್ಯಗಳನ್ನು ಪತ್ತೆಹಚ್ಚಲು, ಸೇನೆಯಲ್ಲಿ ನುಸುಳುಕೋರರ ಪತ್ತೆಗೆ, ಜಲ ಪ್ರಳಯದಂತಹ ಪ್ರಾಕೃತಿಕ ದುರಂತ ಸಂದರ್ಭದಲ್ಲಿ ಮಣ್ಣಿನಡಿ ಹುದುಗಿರುವವರ ಪತ್ತೆಗೆ, ಹೂತಿರುವ ಕಲಾಕೃತಿಗಳು, ಪ್ರಾಚೀನ ಕಟ್ಟಡಗಳ ಅಡಿಪಾಯ ಮತ್ತು ಸ್ಮಶಾನಗಳನ್ನು ಪತ್ತೆಹಚ್ಚಲು, ಭೂವೈಜ್ಞಾನಿಕ ಅಧ್ಯಯನ ಮೊದಲಾದ ಅಗತ್ಯಗಳಿಗೆ ಬಳಸಲಾಗುತ್ತದೆಆದರೆ 2024 ಜುಲೈನಲ್ಲಿ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಪತ್ತೆಹಚ್ಚಲು ಜಿಪಿಆರ್ ಬಳಸಲಾಗಿದ್ದು, ಅದು ನೀಡಿದ ಮಾಹಿತಿಯು ವಾಸ್ತವಕ್ಕೆ ವಿರುದ್ಧವಾಗಿತ್ತು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top