ವಿದ್ಯುತ್ ಅಪಘಾತದಿಂದ ಕೈ ಕಳಕೊಂಡಿದ್ದ ಅನಮ್‌: ತನಗೆ ಮರಳಿ ಕೈ ಒದಗಿಸಿದ ರಿಯಾಳ ಅಣ್ಣನಿಗೆ ರಾಖಿ ಕಟ್ಟಿದ ಭಾವುಕ ಕ್ಷಣ

ವಿದ್ಯುತ್ ಅಪಘಾತದಿಂದ ಕೈ ಕಳಕೊಂಡಿದ್ದ ಅನಮ್‌: ತನಗೆ ಮರಳಿ ಕೈ ಒದಗಿಸಿದ ರಿಯಾಳ ಅಣ್ಣನಿಗೆ ರಾಖಿ ಕಟ್ಟಿದ ಭಾವುಕ ಕ್ಷಣ

Kadaba Times News

 ಕಡಬ ಟೈಮ್ಸ್, ಪ್ರಮುಖ ಸುದ್ದಿ:ಗುಜರಾತ್‌ನ ವಲ್ಸದ್ ಪ್ರದೇಶದಲ್ಲಿ 16 ವರ್ಷದ ಅನಮ್‌ತ ಅಹಮದ್ ಎಂಬ ಹೆಣ್ಣುಮಗಳು ಶಿವಮ್ ಮಿಸ್ತ್ರಿ ಎಂಬ ಯುವಕನಿಗೆ ರಾಖಿ ಕಟ್ಟಿರುವುದು ಎಲ್ಲರ ಕಣ್ಣಾಲಿಗಳನ್ನು ತಣಿಸಿದೆ. ಈಕೆ ಹೀಗೆ ರಾಕಿ ಕಟ್ಟಲು ಬಳಸಿದ ಕೈ ಈ ಶಿವಮ್‌ನ ತಂಗಿಯದ್ದಾಗಿತ್ತು. 2024 ಸೆಪ್ಟೆಂಬರ್ ನಲ್ಲಿ ಶಿವಮ್‌ನ ತಂಗಿ ರಿಯಾ ತನ್ನ 9ನೇ ವರ್ಷದಲ್ಲಿ ಮೃತಪಟ್ಟಿದ್ದಳು. ಆಕೆಯ ಆ ಕೈಯನ್ನು ಅನಮ್‌ತ ಅಹಮದ್ ಗೆ ಜೋಡಿಸುವ ಮೂಲಕ ವಿಶಿಷ್ಟ ಸೌಹಾರ್ದದ ಕಥೆಯೊಂದು ಬಿಚ್ಚಿಕೊಳ್ಳುತ್ತದೆ.



ಈಗ 12ನೇ ತರಗತಿಯಲ್ಲಿ ಕಲಿಯುತ್ತಿರುವ ಅನಮ್‌ತ ಅಹಮದ್, 2022 ರಲ್ಲಿ ಉಂಟಾದ ವಿದ್ಯುತ್ ಅಪಘಾತದಿಂದಾಗಿ ತನ್ನ ಬಲಗೈಯನ್ನು ಸಂಪೂರ್ಣವಾಗಿ ಕಳಕೊಳ್ಳಬೇಕಾಯಿತು. ಆಕೆಯ ಎಡಗೈ 20 ಶೇಕಡ ಮಾತ್ರ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿತ್ತು. ಕಳೆದ ವರ್ಷದವರೆಗೆ ಈಕೆಗೆ ಬಲಗೈ ಇರಲಿಲ್ಲ.. ಎಡಗೈ ಸರಿಯಾಗಿ ಕೆಲಸ ಮಾಡುತ್ತಲೂ ಇರಲಿಲ್ಲ. ಆದರೆ ಸೂರತ್ ಮೂಲದ ಎನ್‌ಜಿಒ ಒಂದು ಈ ಮಿಸ್ತ್ರಿ ಕುಟುಂಬದ ಜೊತೆ ಸಂಪರ್ಕ ಏರ್ಪಡಿಸಿದೆ. ಮುಂಬೈಯಲ್ಲಿ ವಾಸವಾಗಿರುವ ಈ ಅನಮ್‌ತ ಅಹಮದ್ ಅವರಿಗೆ ಶಿವಂಳ ತಂಗಿಯ ಕೈಯನ್ನು ಜೋಡಿಸುವ ಏರ್ಪಾಟು ಮಾಡಿದೆ. ಅದರ ಭಾಗವಾಗಿ ಇದೀಗ ಅನಮ್‌ತ ಬಲಗೈಯನ್ನು ಹೊಂದಿದ್ದಾಳೆ.

ನಾನು ಆಕೆಯ ಬಲಗೈಯನ್ನು ಮುಟ್ಟಿದೆ ನನಗೆ ನನ್ನ ಮಗಳ ಕೈಯನ್ನು ಮುಟ್ಟಿದ ಅನುಭವವಾಯಿತು. ರಿಯಾ ನಮ್ಮ ಕುಟುಂಬದ ಏಕೈಕ ಮಗಳಾಗಿದ್ದಳು ಎಂದು ಶಿವಮ್‌ರ ತಂದೆ ಬಾಬಿ ಮಿಸ್ತ್ರಿ, ಭಾವುಕವಾಗಿ ಹೇಳಿದ್ದಾರೆ.

2022ರಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ರಿಯಾ ಮೃತಪಟ್ಟಿದ್ದಳು. ತೀವ್ರ ಜ್ವರದ ಕಾರಣಕ್ಕಾಗಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಂತಿಮವಾಗಿ ಆಕೆ ಬ್ರೈನ್ ಹ್ಯಾಮರೇಜಿನಿಂದ ಸಾವಿಗಿಡಾದಳು. ಇದೇ ಸಂದರ್ಭದಲ್ಲಿ ಡೊನೇಟ್ ಲೈಫ್ ಎಂಬ ಎನ್ ಜಿ ಒ ಸಂಘಟನೆಯು ಈ ಕುಟುಂಬವನ್ನು ಸಂಪರ್ಕಿಸಿತಲ್ಲದೆ ಆಕೆಯ ಕೈಯನ್ನು ದಾನ ಮಾಡುವಂತೆ ವಿನಂತಿಸಿತು. ಕಳೆದ ಸೆಪ್ಟಂಬರ್ ನಲ್ಲಿ ಅನಮ್ ತಳಿಗೆ ಕೈಯನ್ನು ಜೋಡಿಸಲಾಯಿತು.


ಮನೆಯ ರಾಕಿ ಬಂಧನದ ವೇಳೆ ಅನಮ್ ತ ತನ್ನ ಹೆತ್ತವರೊಂದಿಗೆ ವಲ್ಸದ್ ಗೆ ಆಗಮಿಸಿದ್ದಳು. ಎರಡು ಕುಟುಂಬಗಳು ಬಾವುಕವಾದವು. ಅನಮ್ ತಳ ತಂದೆ ಅಖಿಲ್ ಅಹಮದನ್ನು ಪ್ರಿಯಾಳ ತಂದೆ ಬಾಬಿ ಮಿಸ್ತ್ರಿ ಆಲಂಗಿಸಿ ಕಣ್ಣೀರುಳಿಸಿದರು.


ಈ ಕಾರ್ಯಕ್ರಮವ ನಮಗೆ ಗೊತ್ತಿರಲಿಲ್ಲ. ಇದನ್ನು ಎನ್‌ಜಿಒ ಸಂಘಟಿಸಿದೆ. ನಮ್ಮ ಮನೆಗೆ ಅನಮ್ ತ ಮತ್ತು ಕುಟುಂಬ ಬಂದದ್ದನ್ನು ನೋಡಿ ಅಪಾರ ಖುಷಿಯಾಯಿತು. ನಾವು ಶಿವಂಗೆ ರಾಖಿ ಕಟ್ಟುವುದಕ್ಕಾಗಿ ಬಂದಿದ್ದೇವೆ ಎಂದು ಅವರು ಹೇಳಿದರು. ನಮ್ಮ ಕಣ್ಣು ತುಂಬಿ ಬಂದಿತ್ತು ಎಂದು ಬಾಬಿ ಮಿಸ್ತ್ರಿ ಹೇಳಿದ್ದಾರೆ.


ಅನಮ್ ತ ಉತ್ತರ ಪ್ರದೇಶದಲ್ಲಿರುವ ತನ್ನ ಕುಟುಂಬಕರ ಮನೆಗೆ ಹೋಗಿದ್ದಳು. ಟೆರೇಸ್ ನಲ್ಲಿ ಆಡುತ್ತಿದ್ದಾಗ ವಿದ್ಯುತ್ ಆಘಾತ ಸಂಭವಿಸಿತ್ತು. ಆಕೆ ಪ್ರಜ್ಞಾ ಶೂನ್ಯವಾಗಿದ್ದಳು. ಆಸ್ಪತ್ರೆಗೆ ಸೇರಿಸಲಾಯಿತು.. ಆಕೆಯ ಬಲಗೈಯನ್ನು ಭುಜದಿಂದ ಕತ್ತರಿಸಬೇಕಾಯಿತು. ಎಡಗೈ ಬಹುತೇಕ ಕೆಲಸ ಮಾಡ್ತಾ ಇರಲಿಲ್ಲ. ಆಗ ಆಕೆ 10ನೇ ತರಗತಿಯಲ್ಲಿದ್ದಳು. ಬಳಿಕ ಎಡಗೈಯಲ್ಲಿ ಬರೆಯಲು ಪ್ರಾರಂಭಿಸಿದಳು.. ನಿಧಾನಕ್ಕೆ ಸ್ಪರ್ಶಜ್ಞಾನ ಸಿಗತೊಡಗಿತು. ಪಟ್ಟು ಬಿಡದೆ ಹೋರಾಡಿದ ಆಕೆ ಬಳಿಕ 10ನೇ ತರಗತಿ ಪರೀಕ್ಷೆಗೆ ಹಾಜರಾದಳು ಮತ್ತು ಎಡಗೈಯಲ್ಲಿ ಬರೆದು 92 ಶೇಕಡ ಅಂಕ ಪಡೆದಳು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top