




ಕಡಬ: ಸರ್ಕಾರಿ ಶಾಲೆಯೊಂದರ ಪ್ರಮುಖ ದಾಖಲೆ ಸಹಿತ ಬೀಗದ ಗೊಂಚಲು ಇದ್ದ ಬ್ಯಾಗ್ ವಾಹನದಿಂದ ಬಿದ್ದಿದ್ದು ಆಟೋ ಚಾಲಕರೊಬ್ಬರು ಸಕಾಲಕ್ಕೆ ಶಾಲಾ ಮುಖ್ಯೋಪಾಧ್ಯಾಯರಿಗೆ ತಲುಪಿಸಿ ಬದ್ದತೆ ತೋರಿದ್ದಾರೆ.
ಆಟೋ ಚಾಲಕ ಹಸ್ತಾಂತರ ಮಾಡುತ್ತಿರುವುದು
ಕಡಬ ತಾಲೂಕು ಚಾರ್ವಾಕ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ್ ಎಸ್ ಅವರು ಆ. 7 ರಂದು ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದರು. ಸುಮಾರು 5:30 ಗಂಟೆಗೆ ಕಡಬ ಹಳೇಸ್ಟೇಷನ್ ಸರ್ಕಲ್ ಕಲ್ಲುಗುಡ್ಡೆ ಕ್ರಾಸ್ ಬಳಿ ಕಪ್ಪುಬಣ್ಣದ ಬ್ಯಾಗ್ ಕಳೆದು ಹೋಗಿರುವುದಾಗಿ ಅಂದಾಜಿಸಿದ್ದರು. ಅದರಲ್ಲಿ ಶಾಲಾ ಮುಖ್ಯ ದಾಖಲಾತಿಗಳು ಹಾಗೂ ಶಾಲೆಯ ಬೀಗದಕೀ ಗಳು ಇರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು.
ಜೊತೆಗೆ ಪೊಲೀಸ್ ಬೀಟ್ ಗ್ರೂಪ್ ಗಳಲ್ಲಿ ಪ್ರಕಟನೆ ರೂಪದಲ್ಲಿ ಹೊರಡಿಸಿ ಮಾಹಿತಿ ದೊರಕಿದಲ್ಲಿ ಪೊಲೀಸರಿಗೆ ಅಥವಾ ಮುಖ್ಯೋಪಾಧ್ಯಾಯರಿಗೆ ತಿಳಿಸುವಂತೆ ವಿನಂತಿಸಲಾಗಿತ್ತು. ಈ ಬ್ಯಾಗ್ ಕಡಬದ ಆಟೋ ಚಾಲಕರಾದ ರೌವಾಜ್ ಅವರಿಗೆ ಸಿಕಿದ್ದು ಬಳಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರ ಮಾಡಿದ್ದಾರೆ. ಆಟೋ ಚಾಲಕನ ಈ ಬದ್ದತೆಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.