




ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಈಶ್ವರ ಗೌಡ ಪಿ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.
![]() |
ಪ್ರಾಧ್ಯಾಪಕ ಈಶ್ವರ ಗೌಡ ಪಿ |
ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯವು ಈ ಡಾಕ್ಟರೇಟ್ ಪದವಿ ನೀಡಿದೆ. ಡಾ. ಈಶ್ವರ ಗೌಡ ಪಿ ಅವರು ಬೆಂಗಳೂರು ವಿ .ವಿ .ಪುರಂ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಈಶ್ವರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ ಗ್ರೋತ್&ರ‍್ಫಾರ‍್ಮೆನ್ಸ್ ಆಫ್ ರೀಜನಲ್ ರೂರಲ್ ಬ್ಯಾಂಕ್ಸ್ ಇನ್ ಕರ್ನಾಟಕ ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಪ್ರಸ್ತುತ ಕಡಬ ತಾಲೂಕಿನ ಕುಂತೂರು-ಪೆರಾಬೆ ಗ್ರಾಮದ ಶೇಡಿ ನಿವಾಸಿಯಾಗಿದ್ದಾರೆ.