



ಕಡಬ: ಕಡಬ ಪಟ್ಟಣ ಪಂಚಾಯತ್ಗೆ ಆ.17ರಂದು ನಡೆಯಲಿರುವ ಚುನಾವಣೆಯಲ್ಲಿ 13 ವಾರ್ಡ್ಗಳಲ್ಲಿ 32 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಆ.6ರಂದು ನಾಮಪತ್ರ ಪರಿಶೀಲನೆ ನಡೆದು ಆ.8ರಂದು ನಾಮಪತ್ರ ಹಿಂತೆಗೆತ ಪ್ರಕ್ರಿಯೆ ಮುಗಿದು ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕಳಾರ
ಮತ್ತು ಕಡಬ ವಾರ್ಡ್‌ನಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್.ಡಿ.ಪಿ.ಐ
ಮತ್ತು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪನ್ಯ ವಾರ್ಡ್‌ನಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್.ಡಿ.ಪಿ.ಐ
ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಅಭ್ಯರ್ಥಿ ಕಣದಲ್ಲಿದ್ದು
ತೀವ್ರ ಪೈಪೋಟಿ ಏರ್ಪಟ್ಟಿದೆ. ಉಳಿದಂತೆ 10 ವಾರ್ಡುಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯಲಿದೆ.
ಬಿಜೆಪಿ ಅಭ್ಯರ್ಥಿ ಪ್ರೇಮಾ 2 ವಾರ್ಡ್‌ಗಳಲ್ಲಿ ಸ್ಪರ್ಧೆ13 ವಾರ್ಡ್‌ಗಳ ಪೈಕಿ ಕೋಡಿಂಬಾಳ ವಿದ್ಯಾನಗರದ ಪ್ರೇಮಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಎರಡು ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.1ನೇ ಕಳಾರ ವಾರ್ಡ್ ಮತ್ತು 6ನೇ ಕಡಬ ವಾರ್ಡ್‌ನಲ್ಲಿ ಪ್ರೇಮಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
8334 ಮತದಾರರು 13 ಮತಗಟ್ಟೆಗಳು: 13
ವಾರ್ಡುಗಳಲ್ಲಿ 8,334 ಅರ್ಹ
ಮತದಾರರಿದ್ದು ಇದರಲ್ಲಿ 4018 ಪುರುಷ ಹಾಗೂ 4318 ಮಹಿಳಾ ಮತದಾರರಿದ್ದಾರೆ. 1ನೇ, ಕಳಾರ ವಾರ್ಡ್ ಶಾಲೆಯಲ್ಲಿ ಮತಗಟ್ಟೆಯಾಗಿದ್ದು 252 ಪುರುಷ, 288 ಮಹಿಳಾ ಮತದಾರರಿದ್ದಾರೆ. 2ನೇ,ಕೋಡಿಬೈಲು ವಾರ್ಡ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಯಿದ್ದು 221 ಪುರುಷ-258 ಮಹಿಳಾ ಮತದಾರರಿದ್ದಾರೆ. 3ನೇ,ಪನ್ಯ ವಾರ್ಡ್ ಸ.ಹಿ.ಪ್ರಾ.ಶಾಲೆ
ಪನ್ಯ ಗುರಿಯಡ್ಕ ಮತಗಟ್ಟೆಯಾಗಿದ್ದು ಈ ವಾರ್ಡಿನಲ್ಲಿ 248 ಪುರುಷ ಹಾಗೂ
261 ಮಹಿಳಾ ಮತದಾರರಿದ್ದಾರೆ. 4ನೇ,ಬೆದ್ರಾಜೆ ವಾರ್ಡ್ ಸಂತ ಜೋಕಿಮ್ ಹಿ.ಪ್ರಾ.ಶಾಲೆ
ಕಡಬ ಮತಗಟ್ಟೆಯಾಗಿದ್ದು ಈ ವಾರ್ಡುನಲ್ಲಿ 215 ಪುರುಷ ಹಾಗೂ
256 ಮಹಿಳಾ ಮತದಾರರಿದ್ದಾರೆ. 5ನೇ,ಮಾಲೇಶ್ವರ ವಾರ್ಡ್
ಮಾಲೇಶ್ವರ ಅಂಗನವಾಡಿ ಕೇಂದ್ರ ಮತಗಟ್ಟೆಯಾಗಿದ್ದು 296 ಪುರುಷ, 341 ಮಹಿಳಾ ಮತದಾರರಿದ್ದಾರೆ. 6ನೇ, ಕಡಬ ವಾರ್ಡ್ಗೆ ಅಂಬೇಡ್ಕರ್ ಭವನ ಮತಗಟ್ಟೆಯಾಗಿದ್ದು 401 ಪುರುಷ ಹಾಗೂ 396 ಮಹಿಳಾ ಮತದಾರರಿದ್ದಾರೆ.7ನೇ, ಪಣೆಮಜಲು ವಾರ್ಡ್ ಸರಕಾರಿ ಪದವಿ ಪೂರ್ವ ಕಾಲೇಜು ಮತಗಟ್ಟೆಯಾಗಿದ್ದು ಈ ವಾರ್ಡ್ನಲ್ಲಿ 350 ಪುರುಷ, 410 ಮಹಿಳಾ
ಮತದಾರರಿದ್ದಾರೆ. 8ನೇ,ಪಿಜಕಳ ವಾರ್ಡ್ ಹಿ.ಪ್ರಾ.ಶಾಲೆ ಪಿಜಕಳ ಮತಗಟ್ಟೆಯಾಗಿದ್ದು ಈ ವಾರ್ಡ್ನಲ್ಲಿ 323 ಪುರುಷ,384 ಮಹಿಳಾ
ಮತದಾರರಿದ್ದಾರೆ.9ನೇ, ಮೂರಾಜೆ ವಾರ್ಡ್ಗೆ ಕಡಬ ಸ.ಪ.ಪೂರ್ವ
ಕಾಲೇಜು(ಎಡಭಾಗ) ಮತಗಟ್ಟೆಯಾಗಿದ್ದು ಈ ವಾರ್ಡ್ ನಲ್ಲಿ 287 ಪುರುಷ, 320 ಮಹಿಳಾ
ಮತದಾರರಿದ್ದಾರೆ. 10ನೇ, ದೊಡ್ಡಕೊಪ್ಪ ವಾರ್ಡ್ಗೆ ಕಲ್ಲಂತ್ತಡ್ಕ ಅಂಗನವಾಡಿ ಕೇಂದ್ರ ಮತಗಟ್ಟೆಯಾಗಿದ್ದು ಈ ವಾರ್ಡ್ನಲ್ಲಿ 415 ಪುರುಷ,377 ಮಹಿಳಾ
ಮತದಾರರಿದ್ದಾರೆ.11ನೇ, ಕೋಡಿಂಬಾಳ ವಾರ್ಡ್ಗೆ ಓಂತ್ರಡ್ಕ ಹಿ.ಪ್ರಾ,ಶಾಲೆ
ಮತಗಟ್ಟೆಯಾಗಿದ್ದು ಈ ವಾರ್ಡ್ನಲ್ಲಿ 318 ಪುರುಷ, 316 ಮಹಿಳಾ
ಮತದಾರರಿದ್ದಾರೆ.12ನೇ, ಮಜ್ಜಾರು ವಾರ್ಡ್ಗೆ ಹಿ.ಪ್ರಾ,ಶಾಲೆ
ಕೋಡಿಂಬಾಳ ಮತಗಟ್ಟೆಯಾಗಿದ್ದು ಈ ವಾರ್ಡ್ ನಲ್ಲಿ 327 ಪುರುಷ, 346 ಮಹಿಳಾ
ಮತದಾರರಿದ್ದಾರೆ.13ನೇ, ಪುಳಿಕುಕ್ಕು ವಾರ್ಡ್ ಹಿ.ಪ್ರಾ.ಶಾಲೆ
ಓಂತ್ರಡ್ಕ(ದಕ್ಷಿಣ ಭಾಗ) ಮತಗಟ್ಟೆಯಾಗಿದ್ದು ಇಲ್ಲಿ 365 ಪುರುಷ ಹಾಗೂ 365 ಮಹಿಳಾ ಮತದಾರರಿದ್ದಾರೆ.
ಆ.17 ಮತದಾನ, ಆ.20 ಮತ ಎಣಿಕೆ: ಚುನಾವಣೆಯು ವಿಧಾನಸಭಾ ಚುನಾವಣಾ ಮಾದರಿಯಲ್ಲಿ ನಡೆಯಲಿದ್ದು, ನೋಟ ಮತದಾನಕ್ಕೆ ಅವಕಾಶವಿದೆ .ಎಲ್ಲ ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿವೆ ,ಅಂಗವಿಕಲರಿಗೆ ಗಾಲಿ ಕುರ್ಚಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಚುನಾವಣೆಯು ಆ.17ರಂದು ನಡೆಯಲಿದ್ದು, ಆ.20ರಂದು ಮತ ಎಣಿಕೆಯು ಕಡಬ ಆಡಳಿತ ಸೌಧದಲ್ಲಿ ನಡೆಯಲಿದೆ. ಮತಪೆಟ್ಟಿಗೆಗಳನ್ನು ತಾಲೂಕು ಆಡಳಿತ ಸೌಧದ ಸ್ಟ್ರಾಂಗ್ ರೂಮ್‌ನಲ್ಲಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿ ಸಹಾಯವಾಣಿ ನಂ.260435 ಆರಂಭಿಸಲಾಗಿದೆ.