




ಕುಕ್ಕೆ ಸುಬ್ರಹ್ಮಣ್ಯ: ಇಲ್ಲಿನ ಠಾಣಾ ವ್ಯಾಪ್ತಿಯ ಐನಕೀದು ಗ್ರಾಮದಲ್ಲಿ ಹಾಲಿನ ಡೇರಿ ಮತ್ತು ಗೂಡಂಗಡಿಯಿಂದ ಹಣ ಕಳ್ಳತನಗೈದ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕಾಸರಗೋಡು ಮಂಜೇಶ್ವರ ಮೂಲದ ಸತೀಶ್(40ವ) ಬಂಧಿತ ಆರೋಪಿಯಾಗಿದ್ದಾನೆ. ಐನೇಕಿದು ಗ್ರಾಮದಲ್ಲಿ ಹಾಲಿನ ಡೇರಿ ಮತ್ತು ಗೂಡಂಗಡಿಯಿಂದ ಸುಮಾರು 6,500 ರೂ ಹಣ ಕಳ್ಳತನವಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಆ. ಕ್ರ -44/2025 ಕಲಂ :305,331(4) BNS ಪ್ರಕರಣ ಧಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಳಸಿದ ಮದ್ಯದ ಪ್ಯಾಕೆಟ್ ಆಧಾರದಲ್ಲಿ ಸುಬ್ರಹ್ಮಣ್ಯ ಬಾರ್ ಸಹಕಾರದಿಂದ ಆರೋಪಿಯನ್ನು ದಸ್ತ್ ಗಿರಿ ಮಾಡಲಾಗಿದೆ. ಈ ವೇಳೆ ಒಟ್ಟು 3057 ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ಕನೂನು ಪ್ರಕ್ರಿಯೆ ಮುಗಿಸಿ ಮಾನ್ಯ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಾಡಿಸಿರುವುದಾಗಿ ತಿಳಿದು ಬಂದಿದೆ.ಎಸ್.ಐ ಕಾರ್ತೀಕ್ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿತ್ತು.