




ಯೂಟ್ಯೂಬ್ನಲ್ಲಿ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳ ಬಗ್ಗೆ ಎಐ ವಿಡಿಯೋ ಮಾಡಿ ವೈರಲ್ ಆಗಿದ್ದ ಸಮೀರ್ ಎಂಡಿ (Sameer MD) ಬಂಧನದ ಭೀತಿಯಿಂದ ಪಾರಾಗಿದ್ದಾನೆ.
ಇತ್ತೀಚೆಗೆ
ಸಮೀರ್ ಎಂಡಿ ತನ್ನ ಯೂಟ್ಯೂಬ್‌ನಲ್ಲಿ ಧರ್ಮಸ್ಥಳದ ಕುರಿತು ಎಐ ತಂತ್ರಜ್ಞಾನ ಬಳಸಿ
ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದ. ಈ ವಿಡಿಯೋ ಕೆಲವೇ
ಗಂಟೆಗಳಲ್ಲಿ ಎಲ್ಲೆಡೆ ಸದ್ದು ಮಾಡಿತ್ತು.ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣದ ಬಗ್ಗೆ ಪ್ರಚೋದನಕಾರಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಎಂಡಿ ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಮೀರ್ ವಿಡಿಯೋ ಪರ – ವಿರೋಧದ ಚರ್ಚೆ ಹುಟ್ಟುಹಾಕಿತ್ತು. ಈ ಕುರಿತು ಧರ್ಮಸ್ಥಳ ಪೊಲೀಸರು ಜುಲೈ 12ರಂದು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು.ಗುರುವಾರ (ಆ.21) ಇದೇ ಪ್ರಕರಣ ಸಂಬಂಧ ಪೊಲೀಸರು ಸಮೀರ್ನನ್ನು ಬಂಧಿಸಲು ಬೆಂಗಳೂರಿಗೆ ಬಂದಿದ್ದಾರೆ. ಬನ್ನೇರುಘಟ್ಟ ಬಳಿಯ ಹುಲ್ಲಳ್ಳಿಯಲ್ಲಿರುವ ಸಮೀರ್ ಮನೆಗೆ ಬಂದಿದ್ದಾರೆ. ಆದರೆ ಸಮೀರ್ ಮನೆಯಲ್ಲಿ ಇಲ್ಲ ಎನ್ನಲಾಗಿದೆ. ಆತನಿಗಾಗಿ ಹುಡುಕಾಟ ನಡೆಸಿದ್ದರು.
ನಿರೀಕ್ಷಣಾ ಜಾಮೀನಿಗೆ ಅರ್ಜಿ :ಬಂಧನದ ಭೀತಿ ಎದುರಾದ ಬೆನ್ನಲ್ಲೇ ಸಮೀರ್ ಎಂಡಿ ಆಗಸ್ಟ್ 19ರಂದೇ ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಇದೀಗ ಆತನಿಗೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನನ್ನು ನೀಡಿದೆ.