




ಇಲ್ಲಿನ ಯುವಕರು ಹಗಲಿನಲ್ಲಿ ತಮ್ಮ ತಮ್ಮ ಕೆಲಸಕ್ಕೆ ಹೋಗುತ್ತಾರೆ. ಸಾಯಂಕಾಲದ ಬಳಿಕ ಎಲ್ಲರೂ ಈ ವಿಶ್ರಾಂತಿ ತಾಣದಲ್ಲಿ ಒಟ್ಟು ಸೇರುತ್ತಾರೆ. ಪರಸ್ಪರ ವಿಚಾರ ವಿನಿಯಮ ಮಾಡಿಕೊಳ್ಳುತ್ತಾರೆ. ಯಾವುದೇ ಕಾರ್ಯಕ್ರಮವಿದ್ದರೂ ಜೊತೆಗೆಯಾಗಿ ಭಾಗವಹಿಸಿ ನೆರವಾಗುವುದನ್ನು ಮಾಡಲು ಎಲ್ಲರ ಅಭಿಪ್ರಾಯ ಹಂಚಿಕೊಳ್ಳುತ್ತಾರೆ .ಕಾಲನಿಯಲ್ಲಿ ಯಾವುದೇ ಸಮಸ್ಯೆಗಳಾದರೂ ಸ್ಪಂದಿಸಲು ಮುಂದಾಗುತ್ತಾರೆ. ಎಲ್ಲರೂ ಒಗ್ಗಟ್ಟಿನಿಂದ ಇರಲು ಇದೊಂದು ಉತ್ತಮ ವೇದಿಕೆಯಾಗಿದೆ. ಇಲ್ಲಿನ ಹಿರಿಯರು-ಕಿರಿಯರು ನಿತ್ಯ ವಿಶ್ರಾಂತಿ ಪಡೆಯುತ್ತಾ ಮುಖಾಮುಖಿಯಾಗುತ್ತಾರೆ..
ಕಡಬ/ಆಲಂಕಾರು: ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂತೂರಿನ ಯುವಕರ ತಂಡವೊಂದು ತಮ್ಮ ಕಾಲನಿ ರಸ್ತೆಯಲ್ಲಿ ಸುಂದರ ವಿಶ್ರಾಂತಿ ತಾಣವೊಂದನ್ನು ನಿರ್ಮಿಸಿ ಜನರ ಮಾದರಿಯಾಗಿದ್ದಾರೆ. ಕೆಂಪು ಕಲ್ಲು ಸಮಸ್ಯೆಯಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದ ಯುವಕರು ತಮ್ಮ ಸಮಯವನ್ನು ಸಮಾಜಮುಖಿ ಕಾರ್ಯಾಕ್ಕೆ ತೊಡಗಿಸಿಕೊಂಡಿರುದಾಗಿದೆ.
ಕಡಿರಡ್ಕ ಮತ್ತು ಪುರುಷಬೆಟ್ಟು ಭಾಗದ ಯುವಕರು ಎಂಟು ವರ್ಷಗಳ ಹಿಂದೆಯೇ ಸಮರ್ಪಕ ವಿಶ್ರಾಂತಿ ತಾಣವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು. ಹೀಗಾಗಿ ಆರಂಭದಲ್ಲಿ
ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು .ಇದೀಗ ಯುವಕರೆಲ್ಲ
ಸೇರಿ ತಮ್ಮದೇ ಖರ್ಚಿನಲ್ಲಿ ಈ ವಿಶ್ರಾಂತಿ ತಾಣ ನಿರ್ಮಿಸಿದ್ದಾರೆ. ಜೊತೆಗೆ ಸ್ಥಳೀಯ ಸಮಾನ ಮನಸ್ಕ ದಾನಿಗಳ ನೆರವನ್ನೂ ಪಡೆದಿದ್ದಾರೆ.
ಈ ನೂತನ ತಂಗುದಾಣವನ್ನು ಹಿರಿಯರಾದ ನಕ್ಕುರ ಪುರುಷಬೆಟ್ಟು ಅವರು ದೀಪ ಪ್ರಜ್ವಲಿಸುವುದರ
ಮೂಲಕ ಉದ್ಘಾಟಿಸಿದ್ದಾರೆ. ಗ್ರಾ.ಪಂ ಸದಸ್ಯ ಸದಾನಂದ ಕುಂಟ್ಯಾನ ಅವರು "ಅಭಿಮಾನಿ ಬಳಗ ಕಡಿರಡ್ಕ" ಎಂಬ ನಾಮಫಲಕ ಅನಾವರಣಗೊಳಿಸಿದರು.
ತಂಗುದಾಣಕ್ಕೆ ದಾನಿಗಳಾಗಿ ಸಹಕರಿಸಿದ ಇಬ್ರಾಹಿಂ
ಕಜೆ, ಫಯಾಜ್ ಚಾಮೆತ್ತಡ್ಕ, ನೌಶಾದ್ ಕೋಚಕಟ್ಟೆ, ಸಾಜಾನ್ ಕುಂತೂರ್, ಪುರಂದರ ಗುತ್ತುಪಾಲ್, ಪೆರಾಬೆ ಗ್ರಾಮ ಪಂಚಾಯತ್ ಸದಸ್ಯರಾದ ಸದಾನಂದ ಕುಂಟ್ಯಾನ,
ಮೆನ್ಸಿ ಸಾಜಾನ್ ಕುಂತೂರ್, ಲೀಲಾವತಿ ಆಗತ್ತಾಡಿ,ಗಂಗಾಂಧರ ಕಡೀರಡ್ಕ ಇವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಅಲಂಕಾರು ಮೆಸ್ಕಾಂ ಸಿಬ್ಬಂದಿ ಚಿದಾನಂದ್
ಅವರ ಕಾರ್ಯ ನಿಷ್ಠೆಯನ್ನುಗುರುತಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಅಭಿಮಾನಿ ಬಳಗದ ಸದಸ್ಯರಾದ ಸುಂದರ
ಪುರುಷಬೆಟ್ಟು, ವಿಶ್ವಾಸ್ ಪುರುಷಬೆಟ್ಟು, ಮಾಧವ ಪುರುಷಬೆಟ್ಟು, ಕಡಿರಡ್ಕ ನಿವಾಸಿಗಳಾದ ಆನಂದ, ಹರೀಶ್, ಲೋಕೇಶ್, ದಾಮೋದರ, ತಾರಾನಾಥ್, ದಯಾನಂದ,
ನಿತಿನ್, ಯೋಗೀಶ್, ಯತೀಶ್, ಗಣೇಶ್, ಪ್ರವೀಣ್, ಶಿವಾನಂದ ಮತ್ತು ಆಲಂಕಾರು ಮೊಗೇರ ಸಂಘದ ಕಾರ್ಯದರ್ಶಿ
ಸಂದೀಪ್ ಪಾಂಜೋಡಿ ಸದಸ್ಯರಾದ ಸುರೇಶ್ ತೋಟಂತಿಲ ಮೆಸ್ಕಾಂ ಸಿಬ್ಬಂದಿಯಾದ ಪರಶುರಾಮ್ ಹಾಗೂ ಕಡಿರಡ್ಕ
ಮತ್ತು ಪುರುಷಬೆಟ್ಟು ಕಾಲೋನಿ ನಿವಾಸಿಗಳು ಉಪಸ್ಥಿತರಿದ್ದರು. ಆಲಂಕಾರು ಮೊಗೇರ ಸಂಘದ ಸದಸ್ಯ ಮಹಾಬಲ
ಪಡುಬೆಟ್ಟು ಕಾರ್ಯಕ್ರಮದ ನಿರೂಪಿಸಿದರು.