



ಕಡಬ: ಹಲ್ಲೆ ಪ್ರಕರಣವೊಂದರಲ್ಲಿ ಜಾಮೀನು ಪಡೆದು ಬಳಿಕ ನ್ಯಾಯಾಲಯಕ್ಕೆ ವಿಚಾರಗೆ ಹಾಜರಾಗದೆ ಆರೋಪಿಯನ್ನು ಪತ್ತೆ ಹಚ್ಚಿ ಮತ್ತೆ ಬಂಧಿಸಿದ್ದು ಮಾನ್ಯ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಕಡಬ
ತಾಲೂಕು ರಾಮಕುಂಜ ಗ್ರಾಮದ ಆತೂರು ನಿವಾಸಿ ಯೂಸೂಪ್(32ವ) ಬಂಧಿತ ವ್ಯಕ್ತಿ;
2019 ರ ಜೂನ್ ಆತೂರು ಜಂಕ್ಷನ್ ಬಳಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಘಟನೆ ನಡೆದಿತ್ತು. ಆರೋಪಿ ಸಹಿತ ಇತರ ಮೂವರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ (ಠಾಣಾ ಅ ಕ್ರ: 91/2019 ಕಲಂ: 341,323,324,504,506 R/w 34 IPC ) ಪ್ರಕರಣ ದಾಖಲಾಗಿತ್ತು. ಸುಮಾರು 3 ವರ್ಷಗಳಿಂದ 20 ಕ್ಕಿಂತ ಹೆಚ್ಚು ಬಾರಿ ಪುತ್ತೂರು ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಹೀಗಾಗಿ ನ್ಯಾಯಾಲಯಕ್ಕೆ ವಿಚಾರಣೆ ಬಗ್ಗೆ ಹಾಜರಾಗದೇ ನಿಯಮಾವಳಿ ಉಲ್ಲಂಘಿಸಿದ ಈತನ ವಿರುದ್ಧ ಕಡಬ ಠಾಣೆಯಲ್ಲಿ ಕಲಂ:269 BNS-2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ವಾರಂಟ್
ಆರೋಪಿ ಪತ್ತೆ ಬಗ್ಗೆ ಉಪ್ಪಿನಂಗಡಿ ಸಿಪಿಐ ರವರ ಮಾರ್ಗದರ್ಶನದಲ್ಲಿ ಕಡಬ ಠಾಣಾ ಪಿ ಎಸ್ ಐ
ರವರ ನಿರ್ದೇಶನದಂತೆ ಕಡಬ ಠಾಣಾ ವಾರೆಂಟ್ ತಂಡ ಆರೋಪಿಯನ್ನು ದಸ್ತಗಿರಿ ಮಾಡಿದೆ.