



KADABA TIMES (ಕಡಬ ಟೈಮ್ಸ್ ) ಕಡಬ: ಸರಕಾರ ಮಹಿಳೆಯರಿಗೆ ಬಸ್ಸು ಫ್ರೀ ಮಾಡಿದ ಬಳಿಕ ಟ್ಯಾಕ್ಷಿಯವರು, ಅಟೋದವರು ಬಾಡಿಗೆ ಕಡಿಮೆಯಾ ಗಿ ಸಂಕಷ್ಟದಲ್ಲಿದಾರೆ ಎಂದ ಸುಳ್ಯ ಶಾಸಕಿಯವರ ಮಾತಿಗೆ ವೇದಿಕೆಯಲ್ಲಿಯೇ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಉತ್ತರಿಸಿದ ವಿದ್ಯಾಮಾನ ಬಿಳಿನೆಲೆಯಲ್ಲಿ ನಡೆದಿದೆ.
ಸುಬ್ರಹ್ಮಣ್ಯ
ರೋಡ್ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಮಹಾಸಭೆ ಮತ್ತು ಅಂಬುಲೆನ್ಸ್ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ
ಸಮಾರಂಭ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ
ವಠಾರದಲ್ಲಿ ಜು.15ರಂದು ನಡೆದಿತ್ತು. ಕಾಂಗ್ರೆಸ್-ಬಿಜೆಪಿಯ
ಪ್ರಮುಖರೂ ಆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಅಂಬ್ಯುಲೆನ್ಸ್
ಲೋಕಾರ್ಪಣೆ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು ವೇದಿಕೆಯಲ್ಲಿ ಟ್ಯಾಕ್ಸಿ
ಚಾಲಕರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸುತ್ತಾ ನಗುತ್ತಲೇ
ಸರಕಾರ ಮಹಿಳೆಯರಿಗೆ ಬಸ್ಸು ಫ್ರೀ ಮಾಡಿದ ಬಳಿಕ ಟ್ಯಾಕ್ಷಿಯವರು,
ಅಟೋದವರು ಬಾಡಿಗೆ ಕಡಿಮೆಯಗಿ ಸಂಕಷ್ಟದಲ್ಲಿದಾರೆ. ಬಸ್ಸಿನಲ್ಲಿ ಮಹಿಳೆಯರು ಹೆಚ್ಚು ಪ್ರಯಾಣಿಸುತ್ತಾರೆ, ಸಾಮಾನ್ಯ
ಜನರು ಕೂಡ ಟಾಕ್ಸಿಯವರು ಜನ ಆಗುತ್ತಿಲ್ಲವೆಂದು ಗಾರೆ
ಕೆಲಸಕ್ಕೆ ಹೋಗುತ್ತಿದ್ದಾರೆ. ಉಳ್ಳವರು ಟ್ಯಾಕ್ಸಿಗಳಲ್ಲಿ
ಪ್ರಯಾಣ ಮಾಡಿ ಅವರಿಗೆ ಆರ್ಥಿಕ ಚೈತನ್ಯ ತುಂಬುವ ಕಾರ್ಯ ಮಾಡಬೇಕು ಎಂದಿದ್ದರು.
ಸಭೆಯಲ್ಲಿ ಶಾಸಕಿಯವರ ಮಾತು ಮುಗಿದ ನಂತರ ಸರಕಾರದ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿಯವರು ಮಾತನಾಡಿ, ಶಾಸಕಿಯವರು ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಮಾಡಿರುವುದರಿಂದ ಟ್ಯಾಕ್ಸಿ ಚಾಲಕ ಮಾಲಕರಿಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ ಆದರೆ ಇದು ತಪ್ಪು ಅಭಿಪ್ರಾಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಟ್ಯಾಕ್ಸಿ ಚಾಲಕ ಮಾಲಕರಿಗೆ ಯಾವುದೇ ತೊಂದರೆ ಆಗಿಲ್ಲ, ಈಗಾಗಲೇ ಅನೇಕ ಚಾಲಕರನ್ನು ರಾಜ್ಯ ಸಾರಿಗೆ ಸಂಸ್ಥೆಗೆ ಚಾಲಕರಾಗಿ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ .