ಊಟ ತರಲು ಬೈಕಿನಲ್ಲಿ ಹೋದ ಯುವಕ ನಾಪತ್ತೆ :ಮುಳುಗು ಸೇತುವೆಯಲ್ಲಿ ಬೈಕ್ ದಾಟಿಸುವಾಗ ಕೊಚ್ಚಿ ಹೋಗಿರುವ ಶಂಕೆ

ಊಟ ತರಲು ಬೈಕಿನಲ್ಲಿ ಹೋದ ಯುವಕ ನಾಪತ್ತೆ :ಮುಳುಗು ಸೇತುವೆಯಲ್ಲಿ ಬೈಕ್ ದಾಟಿಸುವಾಗ ಕೊಚ್ಚಿ ಹೋಗಿರುವ ಶಂಕೆ

Kadaba Times News

KADABA TIMES (ಕಡಬ ಟೈಮ್ಸ್ ) ಸುಳ್ಯ –ಕಾಸರಗೋಡು ಗಡಿಭಾಗವಾಗಿರುವ ಪಾಣತ್ತೂರಿನ‌ ಮಂಞನಡ್ಕ ಎಂಬಲ್ಲಿ ಪ್ಲಾಂಟೇಷನ್ ನಲ್ಲಿ  ‌ಹಿಟಾಚಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ  ಯುವಕನೋರ್ವ ನಾಪತ್ತೆಯಾಗಿರುವ ಜು.17 ರಂದು ಘಟನೆ ವರದಿಯಾಗಿದೆ.


ಕೇರಳ ಸರಕಾರದ ಅಧಿನಕ್ಕೊಳಪಡುವ ಗೇರು ಬೀಜದ ಪ್ಲಾಂಟೇಷನ್ ನಲ್ಲಿ ಹಿಟಾಚಿಯಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ ಬೆಳಗಾವಿ ಮೂಲದ  ಅನಿಲ್ (19 ವರ್ಷ )ಎಂಬ  ಯುವಕ ಎಂದು ತಿಳಿದು ಬಂದಿದೆ.



ಹಿಟಾಚಿ ಚಾಲಕ  ಯುವಕನಲ್ಲಿ   ಮಧ್ಯಾಹ್ನ ಊಟ ತರುವಂತೆ ಪಾಣತ್ತೂರು ಕಡೆಗೆ ತನ್ನ ಬೈಕಿನಲ್ಲಿ ಕಳುಹಿಸಿದ್ದರು.  ಆದರೆ ಅದೇ ರಸ್ತೆಯಲ್ಲಿ ಬರಬೇಕಾದರೆ ಮಂಞನಡ್ಕ ದೇವಸ್ಥಾನದ ಕೆಳಭಾಗದಲ್ಲಿ ಮುಳುಗು ಸೇತುವೆಯೊಂದಿದೆ.  ವಿಪರೀತ ಮಳೆಯಿಂದಾಗಿ ಸೇತುವೆ ಮೇಲೆ ನೀರು ಬಂದಿದ್ದು ಸೇತುವೆ ಮೇಲೆ ಬೈಕ್ ದಾಟಿಸುವಾಗ ನೀರಿನ‌ ಸೆಳೆತಕ್ಕೆ ಸಿಕ್ಕಿ ಯುವಕ ಬೈಕ್ ಸಮೇತ ಕೊಚ್ಚಿಕೊಂಡುಹೋಗಿರುವ ಸಾಧ್ಯತೆ ಇದೆ ಎಂದು ಸಂಶಯಿಸಲಾಗಿದೆ.


ಯುವಕನ ಪತ್ತೆಗಾಗಿ ನದಿಯಲ್ಲಿ ಹುಡುಕಾಟ ಆರಂಭಿಸಲಾಗಿದ್ದು ಅನಿಲ್ ಹಾಗೂ ಬೈಕಿನ ಸುಳಿವು ಇನ್ನೂ ಸಿಕ್ಕಿಲ್ಲವೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top