



KADABA TIMES (ಕಡಬ ಟೈಮ್ಸ್ )ಕೊಕ್ಕಡ: ಸೌತಡ್ಕದಲ್ಲಿ ದಾಂದಲೆ ನಡೆಸಿ ಜೀವ ಬಳಿ ಪಡೆದಿರುವ ಕಾಡಾನೆಯನ್ನು ಜು.17ರಂದು ಕಾಪಿನಬಾಗಿಲು ವರೆಗೆ ಡ್ರೈವ್ ಮಾಡಿದೆ. ಜು.18ರಂದು ಅರಣ್ಯ ಇಲಾಖೆಯ ಅಧಿಕಾರಿಗಳು ದುಬಾರೆ ಆನೆ ಮಾವುತರನ್ನು (ನುರಿತ ಆನೆ ಡ್ರೈವರ್)ಗಳನ್ನು ಕೊಕ್ಕಡಕ್ಕೆ ಕರೆಸಿದ್ದು, 4ಗಂಟೆಯಿಂದ ಆನೆ ಡ್ರೈವ್ ಕಾಪಿನ ಬಾಗಿಲಿನಿಂದ ಆರಂಭವಾಗಿದೆ.
ಈ
ಸಮಯದಲ್ಲಿ ಸಾರ್ವಜನಿಕರು ಸ್ವತಃ ಆನೆಗಳಿಗೆ ತೊಂದರೆ ನೀಡದೆ, ಮಾಹಿತಿ ಇದ್ದಲ್ಲಿ ನೇರವಾಗಿ ಇಲಾಖೆಯ
ಅಧಿಕಾರಿಗಳಿಗೆ ತಿಳಿಸಿ ಸಹಕರಿಸಬೇಕು. ಜೊತೆಗೆ ಸಾರ್ವಜನಿಕರು ಆದಷ್ಟು ಜಾಗರೂಕತೆಯಿಂದ ಇರಬೇಕು. ಇಲಾಖೆಯಿಂದ
ಕ್ಷಣ ಕ್ಷಣಕ್ಕೂ ಆಯಾ ಗ್ರಾಮದಲ್ಲಿ ಜಾಗರೂಕತೆ ವಿಷಯವಾಗಿ ಅನೌನ್ಸ್ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
ರಾತ್ರಿ ವೇಳೆ ಆನೆ ತಮ್ಮ ಜಮೀನಿಗೆ ಬಂದಿದ್ದೆ ಆದಲ್ಲಿ ಯಾರು ಲೈಟ್ ಬೆಳಕು ತೋರಿಸುವುದು, ಪಟಾಕಿ ಸಿಡಿಸುವುದು, ಆನೆಗಳಿಗೆ ತೊಂದರೆಯಾಗುವಂತ ಯಾವುದೇ ಕಾರ್ಯಾಚರಣೆ ಸ್ವತಃ ಮಾಡುವಂತಿಲ್ಲ, ಈ ಕಾರ್ಯಾಚರಣೆ ಸ್ವತಃ ಇಲಾಖೆಯೇ ನಡೆಸುವುದು.
ಸಾರ್ವಜನಿಕರು ಸ್ವತಃ ತಾವಾಗೇ ಏನೂ ಮಾಡುವಂತಿಲ್ಲ ಅತರ ಏನಾದರೂ
ಮಾಡಿ ತೊಂದರೆ ಆದರೆ ಇಲಾಖೆ ಜವಾಬ್ದಾರಿ ಆಗುವುದಿಲ್ಲ ಎಂದು ಆರ್ ಎಫ್ ಓ ರಾಘವೇಂದ್ರ, ಎ. ಸಿ. ಎಫ್
ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಎ. ಸಿ. ಎಫ್ ಹಸ್ತ ಶೆಟ್ಟಿ ಮಾದ್ಯಮಗಳಿಗೆ ತಿಳಿಸಿದ್ದಾರೆ.