ನಮ್ಮ ಕಡಬಕ್ಕೆ ಹೆಮ್ಮೆ: ಪತ್ರಕರ್ತ ಸಹಿತ ಮೂವರಿಗೆ "ಸೆಲ್ಯೂಟ್ ದಿ ಸೈಲೆಂಟ್‌ ಸ್ಟಾರ್" ಪುರಸ್ಕಾರ

ನಮ್ಮ ಕಡಬಕ್ಕೆ ಹೆಮ್ಮೆ: ಪತ್ರಕರ್ತ ಸಹಿತ ಮೂವರಿಗೆ "ಸೆಲ್ಯೂಟ್ ದಿ ಸೈಲೆಂಟ್‌ ಸ್ಟಾರ್" ಪುರಸ್ಕಾರ

Kadaba Times News

 ಕಡಬ ಟೈಮ್ಸ್ (KADABA TIMES): ಆಲಂಕಾರು:  ಕಡಬದ ಪತ್ರಕರ್ತ ಸಹಿತ ವಿವಿಧ ಕ್ಷೇತ್ರದ ಮೂವರಿಗೆ ಜೇಸಿಐ ಆಲಂಕಾರು ಘಟಕವು  ಸೆಲ್ಯೂಟ್ ದಿ  ಸೈಲೆಂಟ್‌ ಸ್ಟಾರ್  ಪುರಸ್ಕಾರ ನೀಡಿ ಗೌವರವಿಸಿದೆ.



ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ವಿಜಯವಾಣಿ ಪತ್ರಿಕೆಯ  ಪತ್ರಕರ್ತ ಪ್ರವೀಣ್‌ರಾಜ್ ಕೊಯಿಲ,  ಆಲಂಕಾರಿನ  ವೈದ್ಯೆ ಡಾ.ಕೃತಿ ಶೆಟ್ಟಿ,  ಉದ್ಯಮಿ , ಇಂಜಿನಿಯಾರ್ ಮನೋಹರ್ ಕೋಳೆಂಜಿರೋಡಿ ಅವರನ್ನು   ಸನ್ಮಾನಿಸಲಾಯಿತು.



ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಅಕ್ಷತಾ ಶೇಖರ್ ಮಾತನಾಡಿ  ಎಲ್ಲರೂ ಒಟ್ಟಾಗಿ ಆಟಿ ಆಚರಣೆ ಮಾಡುವ ಮೂಲಕ ಪರಸ್ಪರ ಸಹಕಾರ, ಆಚಾರ ವಿಚಾರಗಳ ವಿನಿಮಯ ಮಾಡಿಕೊಳ್ಳಲು ಸಾಧ್ಯವಿದೆ ಎಂದರು. ಜೆಸಿಐ ವಲಯ ೧೫ ರ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅತಿಥಿಯಾಗಿ ಮಾತನಾಡಿ, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಕೊಂಡು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕೆಲಸವಾಗಬೇಕು ಎಂದರು.


ಕಾರ್ಯಕ್ರಮದ ಅಂಗವಾಗಿ ಅಯೋಜಿಸಿದ ವಿವಿಧ ಮನೋರಂಜನ ಕ್ರೀಡೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಮಹಿಳಾ ಜೇಸಿ ಅಧ್ಯಕ್ಷೆ ಸುನಿತಾ ಜಿ ರೈ, ನಿಕಟಪೂರ್ವ ಅಧ್ಯಕ್ಷೆ ಮಮತಾ ಅಂಬರಾಜೆ, ಜೂನಿಯರ್ ಜೆಸಿ ಅಧ್ಯಕ್ಷೆ  ಕೃತಿ ಕೆ ಎಸ್ ಉಪಸ್ಥಿತರಿದ್ದರು. ಜೇಸಿ ಪದಾಧಿಕಾರಿಗಳಾದ ಚೇತನ್ ಮೊಗ್ರಲ್, ಗುರುಕಿರಣ್ ,  ಹೇಮಲತಾ ಬಾಕಿಲ, ಪೂರ್ಣೇಶ್ ಬಾಬ್ಲಬೆಟ್ಟು ಅತಿಥಿಗಳ ಹಾಗು ಸನ್ಮಾನಿತರನ್ನು ಪರಿಚಯಿಸಿದರು. ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಗುರುರಾಜ್ ರೈ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ್ ಪಾಟಾಳಿ ವಂದಿಸಿದರು.

Short Summary (English): At a program organized by JCI Alankaru as part of "Atidonji Dina," three individuals from different fields were honored with the "Salute the Silent Star" award. The awardees included VijayaVani journalist Praveenraj Koila, Dr. Krithi Shetty (doctor from Alankaru), and entrepreneur/engineer Manohar Kolenzirudi. Teachers, JCI officials, and guests highlighted the importance of preserving cultural traditions and community harmony. Various entertainment games were also conducted, and winners were awarded.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top