ಕಡಬಕ್ಕೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಭೇಟಿ

ಕಡಬಕ್ಕೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಭೇಟಿ

Kadaba Times News

 ಕಡಬ ಟೈಮ್ಸ್ (KADABA TIMES): ಕಡಬದಲ್ಲಿ ನ್ಯಾಯಾಲಯವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಪಾಟೀಲ್ ಭೇಟಿ ನೀಡಿ ಇಲ್ಲಿನ ಖಾಸಗಿ ಬಿಲ್ಡಿಂಗ್‌ನ ನೂತನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ನ್ಯಾಯಾಲಯ ಪ್ರಾರಂಭಿಸಲು ಕಟ್ಟಡ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾ ಪ್ರಧಾನ ಸತ್ರ ನ್ಯಾಯಶ ಬಸವರಾಜು ಪಾಟೀಲ್ ಭೇಟಿ


ಈ ಸಂದರ್ಭ  ಮಾಧ್ಯಮದವರೊಂದಿಗೆ  ಮಾತನಾಡಿದ ನ್ಯಾಯಾಧೀಶರು, ನ್ಯಾಯಾಲಯಕ್ಕಾಗಿ ಕಡಬ ಮಿನಿ ವಿಧಾನ ಸೌಧದ ಹಿಂದುಗಡೆ ಮೂರು ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣವಾಗುವ ತನಕ ಈಗ ತಾತ್ಕಾಲಿಕವಾಗಿ ನ್ಯಾಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಇಲ್ಲಿನ ಎ.ಪಿ.ಎಂ.ಸಿ ಕಟ್ಟಡವನ್ನು ಪರಿಶೀಲಿಸಲಾಗಿದ್ದು, ಅದು ಅಷ್ಟೊಂದು ಸೂಕ್ತವಾಗಿಲ್ಲದ ಕಾರಣ ಇಲ್ಲಿ ಖಾಸಗಿ ಕಟ್ಟಡ ಪರಿಶೀಲಿಸಲಾಗಿದೆ. ಕಾದಿರಿಸಿದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿ ನ್ಯಾಯಾಲಯ ಪ್ರಾರಂಭಿಸಲು ಸಮಯವಾಕಾಶ ಬೇಕಾಗುವುದುಂದ ಈಗ ಪರಿಶೀಲಿಸದ ಖಾಸಗಿ ಕಟ್ಟಡದ ಸಾಧಕಬಾಧಕಗಳನ್ನು ತಿಳಿದುಕೊಂಡು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಶೀಘ್ರದಲ್ಲೇ ನ್ಯಾಯಾಲಯ ಪ್ರಾರಂಭಿಸಲಾಗುವುದು ಎಂದರು.


ಲೋಕೋಪಯೋಗಿ ಇಲಾಖಾ ಅಧಿಕಾರಿ ಪ್ರಮೋದ್ ಕುಮಾರ್ ಕೆ.ಕೆ.ನ್ಯಾಯಾಧೀಶರಿಗೆ ಮಾಹಿತಿ ನೀಡಿದರು. ನ್ಯಾಯವಾದಿಗಳಾದ ಶೀನಪ್ಪ ಗೌಡ ಬೈತಡ್ಕ, ಲೋಕೇಶ್ ಎಂ.ಜೆ. ಕೊಣಾಜೆ, ಶಿವಪ್ರಸಾದ್ ಪುತ್ತಿಲ, ಕೃಷ್ಣಪ್ಪ ಗೌಡ ಕಕೈ ನಾರಾಯಣ ಗೌಡ, ಮನೋಹರ ಸಬಳೂರು, ಸುಂದರ ಗೌಡ ಆಲಂಕಾರು, ಅವಿನಾಶ್ ಬೈತಡ್ಕ, ಪ್ರಶಾಂತ್ ಪಂಜೋಡಿ, ಅಶ್ವಿತ್ ಕಂಡಿಗ, ಜ್ಞಾನೇಶ್ ,ಗುರುಚರಣ್ ಕೊಪ್ಪಡ್ಕ, ಚೇತನ್ ಕೊಂಬಾರು, ಜಿಲ್ಲಾ ನ್ಯಾಯಾಲಯದ ಮ್ಯಾನೇಜರ್ ಸುಭಾಶ್, ಗಣೇಶ್ ಬಿಲ್ಡಿಂಗ್ ಮಾಲೀಕ ಸುಂದರ ಗೌಡ ಮಂಡಕರ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ನ್ಯಾಯಾಧೀಶರು ನ್ಯಾಯಾಲಯ ನಿರ್ಮಾಣಕ್ಕೆ ಕಾದಿರಿಸಿದ ಜಾಗವನ್ನು ಪರಿಶೀಲನೆ ಮಾಡಿದರು.


Short Summary (English):District Principal Sessions Judge Basavaraj Patil visited Kadaba on Friday evening to inspect a private building for temporarily starting a court in the town. He stated that while a three-acre plot behind the Mini Vidhana Soudha has been reserved for a permanent court building, construction will take time. The previously considered APMC building was found unsuitable, so a private building is being evaluated. Officials, lawyers, and local representatives were present during the inspection, and the judge also visited the reserved land for the court.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top