




ಕಡಬ: ಸುಬ್ರಹ್ಮಣ್ಯ: ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಕಾರಿ ಆಂಬುಲೆನ್ಸ್ ಚಾಲಕ ಕೆ.ಹೊನ್ನಪ್ಪ ದೇವರಗದ್ದೆ ಅವರ ಶವ ಜು.25ರಂದು ಕುಮಾರಧಾರ ನದಿಯಲ್ಲಿ ಪತ್ತೆಯಾಗಿದೆ.
ಜು.22ರಂದು
ನಾಪತ್ತೆಯಾಗಿದ್ದ ಹಿನ್ನೆಲೆ ತನ್ನ ಪತಿ ನಾಪತ್ತೆಯಾಗಿರುವುದಾಗಿ ಪತ್ನಿ ಪ್ರೇಮ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಿಸಿ
ಕ್ಯಾಮರಾ ಪರಿಶೀಲನೆ ವೇಳೆ ಹೊಳೆ ಬದಿ ತೆರಳಿರುವುದು
ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಲೀಸರು ಹಾಗೂ ಸ್ಥಳೀಯರು ಮೂರು ದಿನದಿಂದ ಹುಡುಕಾಟ ನಡೆಸುತ್ತಿದ್ದರು.
ಇದೀಗ ನಾಪತ್ತೆಯಾಗಿದ್ದ ಅಂಬ್ಯುಲೆನ್ಸ್ ಚಾಲಕನ ಮೃತದೇಹ ಕುಮಾರಧಾರ ನದಿಯಲ್ಲಿ ಸುಮಾರು 3ಕಿ.ಮೀ.
ದೂರದಲ್ಲಿ ಪತ್ತೆಯಾಗಿದೆ.
ಹುಡುಕಾಟಕ್ಕೆ
ಈಶ್ವರ್ ಮಲ್ಪೆ, ಎಸ್.ಡಿ.ಆರ್.ಎಫ್ ತಂಡ, ಸ್ಥಳೀಯರು, ರವಿಕಕ್ಕೆಪದವು ತಂಡ ಹಾಗೂ ಸುಳ್ಯದ ಅಂಬ್ಯುಲೆನ್ಸ್
ಚಾಲಕರ ಸಂಘ ಸಹಕಾರ ನೀಡಿದ್ದರು.
Kadaba – Subrahmanya: Ambulance driver K. Honnappa Devaragadde, missing since July 22, was found dead in the Kumaradhara River on July 25. Police, locals, and SDRF teams had been searching for three days.