ಕಡಬ: ಒಂದು ಕೋಟಿ ಬಿಡುಗಡೆಯಾಗಿದೆ ಎಂದು ಸುಳ್ಳು ಹೇಳಿದ ಕಾಂಗ್ರೆಸ್ ಮುಖಂಡ!

ಕಡಬ: ಒಂದು ಕೋಟಿ ಬಿಡುಗಡೆಯಾಗಿದೆ ಎಂದು ಸುಳ್ಳು ಹೇಳಿದ ಕಾಂಗ್ರೆಸ್ ಮುಖಂಡ!

Kadaba Times News

 


ಕಡಬ ಟೈಮ್ಸ್ (KADABA TIMES):   ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಸಂಬಂಧಿಸಿ   ಸರಕಾರವು ಐದು ಕೊಠಡಿಗೆ ಒಂದು ಕೋಟಿ ರೂ  ಮಂಜೂರುಗೊಳಿಸಿದೆ  ಎಂದು  ಕಾಂಗ್ರೇಸ್ ಮುಖಂಡ ರಾಯ್ ಅಬ್ರಹಾಂ ಈ ಹಿಂದೆ  2024 ರ ಸೆಪ್ಟಂಬರ್ 3 ಪತ್ರಿಕಾಗೋಷ್ಠಿಯಲ್ಲಿ   ಶಾಲಾ ಹಿರಿಯ ವಿದ್ಯಾರ್ಥಿ ಗುರುರಾಜ್ ಕೇವಲ, ಸಾಮಾಜಿಕ ಮುಂದಾಳು ಸಾಜಾನ್ ವರ್ಗೀಸ್   ಹಾಜರಿದ್ದ ವೇಳೆ ಹೇಳಿದ್ದರು. 



ಮಾತು ಮುಂದುವರಿಸುತ್ತಾ  ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಶಿಫಾರಸ್ಸಿನಂತೆ ಜಿಲ್ಲಾಧಿಕಾರಿಯವ ಮುಖಾಂತರ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ನಮ್ಮ ನಾಯಕರ ಒತ್ತಾಯದ ಮೇರೆಗೆ ಸರಕಾರದಿಂದ 85 ರಿಂದ  90 ಲಕ್ಷ ರೂ ಅಂದಾಜು ಒಂದು ಕೋಟಿ. ಅನುದಾನ ಮಂಜೂರುಗೊಂಡಿದೆ ಎಂದು ಹೇಳಿದ್ದರು  


ಅನುದಾನ ಮಂಜುರಾಗಿರುವುದು ನಿಜವೇ  ಎಂದು   ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಮುಖಂಡ  ನೂರಕ್ಕೆ ನೂರು ಸತ್ಯ ನಾನು ಆ ಬಗ್ಗೆ ದಾಖಲೆ ನೀಡುತ್ತೇನೆ,  ಈಗಾಗಲೇ ಮೌಖಿಕ ಆದೇಶ ಬಂದಿದೆ ಎಂದಿದ್ದರು.   ಅನುದಾನ ಬಿಡುಗಡೆ ಬಗ್ಗೆ ಸಂಜೆಯೊಳಗೆ ದಾಖಲೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು.  ವಿಪರ್ಯಾಸವೆಂದರೆ   10 ತಿಂಗಳಾದರೂ ಯಾವುದೇ ದಾಖಲೆ  ನೀಡಿಲ್ಲ. ಹೀಗಾಗಿ ಪತ್ರಿಕಾಗೋಷ್ಠಿ  ಈ ಮೂಲಕ ಸಾರ್ವಜನಿಕರಿಗೆ  ಸುಳ್ಳು ಮಾಹಿತಿ ನೀಡಿರುವುದು ಸ್ಪಷ್ಟವಾಗಿದೆ.  ಶಾಲೆಗೆ ಬಿಡುಗಡೆಯಾದ ಅನುದಾನದ ಬಗ್ಗೆ   ದಾಖಲೆಯನ್ನು ಕಡಬ ಟೈಮ್ಸ್ ತಂಡ ಕಲೆ ಹಾಕಿದೆ.


ದ.ಕ ಶಾಲಾ ಶಿಕ್ಷಣ ಇಲಾಖೆಗೆ ಮಾಹಿತಿ ಹಕ್ಕಿನಲ್ಲಿ ಕೇಳಿದ ಪ್ರಶ್ನೆಗೆ ಅನುದಾನ ವಿವರ ನೀಡಿದೆ.    ಉಪನಿರ್ದೇಶಕರ ಕಚೇರಿಯಿಂದ ವಿವರ ಲಭಿಸಿದೆ. 2024-25 ಸಾಲಿನಲ್ಲಿ  ಎರಡು ಕೊಠಡಿ ನಿರ್ಮಾಣಕ್ಕೆ 29.00 ಲಕ್ಷ ಅನುದಾನ ಮಂಜೂರಾಗಿದ್ದು 25.77 ಲಕ್ಷ ರೂ ಬಿಡುಗಡೆಯಾಗಿದೆ. ಇನ್ನು 2024 -25ನೇ ಸಾಲಿನಲ್ಲಿ ಮಳೆಹಾನಿ ಯೋಜನೆಯಡಿ ತಳಪಾಯ ದುರಸ್ತಿಗೆ 1.50 ಲಕ್ಷ ಮಂಜೂರುಗೊಂಡು ಬಿಡುಗಡೆಯಾಗಿದೆ. ಒಟ್ಟು ಈ ಶಾಲಾ ಅಭಿವೃದ್ದಿಗಾಗಿ 27.27 ಲಕ್ಷ ರೂ ಬಿಡುಗಡೆಯಾಗಿದೆ. 

ಮಾಹಿತಿ ಹಕ್ಕಿನಲ್ಲಿ ಪಡೆದಿರುವ ದಾಖಲೆ


ಶಾಲಾ ಕಟ್ಟಡ ಕುಸಿತವಾದ ಸಂದರ್ಭದಲ್ಲಿ ಕಟ್ಟಡ ಪರಿಶೀಲನೆ  ನಡೆಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಹೊಸದಾಗಿ ಐದು ಕೊಠಡಿಗಳ ರಚನೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹೊಸದಾಗಿ ಐದು ತರಗತಿ ಕೊಠಡಿಗಳ ನಿರ್ಮಾಣಕ್ಕಾಗಿ 85 ಲಕ್ಷ ರೂ. ಮೊತ್ತದ ಅಂದಾಜುಪಟ್ಟಿ ತಯಾರಿಸಿದ್ದು, ಪತ್ರದಲ್ಲಿ ಅನುದಾನ ಮಂಜೂರಾತಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರೊಂದಿಗೆ ಅಪಾಯಕಾರಿ ಕಟ್ಟಡಗಳ ತೆರವಿಗೆ ಒಟ್ಟು 27,266 ರೂ. ನ ಅಂದಾಜುಪಟ್ಟಿಯನ್ನೂ ಕಳುಹಿಸಿಕೊಡಲಾಗಿತ್ತು .

ಸದ್ಯ ಶಾಲಾ ಕೊಠಡಿಯ ಕಾಮಗಾರಿ ಆರಂಭಿಸಲಾಗಿದ್ದು ಪಿಲ್ಲರ್ ಗಳನ್ನು ಮಾತ್ರ ರಚಿಸಲಾಗಿದೆ. ಉಳಿದಂತೆ ನಿರೀಕ್ಷಿತ ಮಟ್ಟಕ್ಕೆ ಕಾಮಗಾರಿ ನಡೆದಿಲ್ಲ ಎಂದು ತಿಳಿದು ಬಂದಿದೆ.  


Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top