ಕಡಬ ಸೇರಿದಂತೆ ರಾಜ್ಯದ ಐದು ಪ.ಪಂ ಗೆ ಚುನಾವಣೆ ನಡೆಸಲು ಡೇಟ್ ಫಿಕ್ಸ್

ಕಡಬ ಸೇರಿದಂತೆ ರಾಜ್ಯದ ಐದು ಪ.ಪಂ ಗೆ ಚುನಾವಣೆ ನಡೆಸಲು ಡೇಟ್ ಫಿಕ್ಸ್

Kadaba Times News

 


ಕಡಬ ಟೈಮ್ಸ್ (KADABA TIMES):  ಕಡಬ:  ಹೊಸದಾಗಿ ರಚನೆಯಾಗಿರುವ ಕಡಬ ಪಟ್ಟಣ ಪಂಚಾಯತ್ ಸೇರಿದಂತೆ ರಾಜ್ಯದ   05 ಪಟ್ಟಣ ಪಂಚಾಯತಿಗಳಿಗೆ  ಸಾರ್ವತ್ರಿಕ ಚುನಾವಣೆಯನ್ನು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ವಾರ್ಡುಗಳಿಗೆ ಉಪ ಚುನಾವಣೆಗೆ ದಿನಾಂಕ ನಿಗದಿಪಡಿಸಿ  ರಾಜ್ಯ ಚುನಾವನಾ ಆಯೋಗವು ಆದೇಶ  ಹೊರಡಿಸಿದೆ.




 ರಾಜ್ಯ ಚುನಾವಣಾ ಆಯೋಗವು ಸಂವಿಧಾನದ ಪರಿಚ್ಛೇದ 243-ಜೆಡ್ ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 ರ ಪ್ರಕರಣ 17 ಮತ್ತು 19 ರನ್ವಯ ಹಾಗೂ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 3(1) ರನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪ.ಪಂ ನ 13 ವಾರ್ಡು ,  ಕೋಲಾರದ ವೇಮಗಲ್ ಕುರುಗಲ್ ನಲ್ಲಿ17 ವಾರ್ಡು , ಚಿಕ್ಕಮಗಳೂರಿನ  ಅಜ್ಜಂಪುರದಲ್ಲಿ 15 ವಾರ್ಡು, ಹಾವೇರಿಯ ರಟ್ಟಿ ಹಳ್ಳಿಯಲ್ಲಿ 11 ವಾರ್ಡು, ಕಲಬುರ್ಗಿಯ ಕಾಳಗಿ ಪ,ಪಂನಲ್ಲಿ 11 ವಾರ್ಡುಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣಾ ವೇಳಾ ಪಟ್ಟಿ


ಆಗಸ್ಟ್ 20  ರ ಒಳಗೆ  ಚುನಾವಣೆ ಮುಗಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಆದೇಶದಂತೆ ಕಡಬ ಪಟ್ಟಣ ಪಂಚಾಯತ್ ಗೆ 13 ವಾರ್ಡುಗಳಿಗೆ ಆಗಸ್ಟ್ 17 ರಂದು ಚುನಾವಣೆ ನಡೆಯಲಿದೆ.   ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಜುಲೈ 29 ,  ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ  ಆಗಸ್ಟ್ 5 , ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ  ಆಗಸ್ಟ್ 6,  ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಆಗಸ್ಟ್ 8, ಮತದಾನ ಅವಶ್ಯಕವಿದ್ದರೆ ಮತದಾನವನ್ನು ನಡೆಸಬೇಕಾದ ದಿನಾಂಕ  ಆಗಸ್ಟ್ 17 (ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಗಳ ವರೆಗೆ)  ,  ಮರು ಮತದಾನ ಇದ್ದಲ್ಲಿ ಮತದಾನವನ್ನು ನಡೆಸ ಬೇಕಾದ ದಿನಾಂಕ  (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಗಳ ವರೆಗೆ) ಆಗಸ್ಟ್ 19,  ಮತಗಳ ಎಣಿಕೆಯ ದಿನಾಂಕ  (ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ) ಆಗಸ್ಟ್ 20 ಆಗಿರುತ್ತದೆ.


ಚುನಾವಣಾ ನೀತಿ ಸಂಹಿತೆಯು ಜುಲೈ29 ರಿಂದ  ಆಗಸ್ಟ್ 20 ರ ವರೆಗೆ    ಸಾರ್ವತ್ರಿಕ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ.



ಜಿಲ್ಲಾಧಿಕಾರಿಗಳು, ಆಯೋಗವು ಆದೇಶಿಸಿದ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 8ರ ಪ್ರಕಾರ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆ ಹೊರಡಿಸುವಂತೆ ಸೂಚಿಸಲಾಗಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top