




ಕಡಬ ಟೈಮ್ಸ್ ,ಪ್ರಮುಖ ಸುದ್ದಿ : ಪತ್ರಿಕೆಗಳನ್ನು ಮೊಬೈಲ್ ನಲ್ಲಿ ಪತ್ರಿಕೆಗಳನ್ನು ಓದುವ ಬದಲು, ಪತ್ರಿಕೆಗಳನ್ನು ಕೊಂಡು ಓದಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಮಾಹಿತಿಗಿಂತ , ಪತ್ರಿಕೆ, ಪುಸ್ತಕಗಳ ಓದುವ ಮಾಹಿತಿ ಹೆಚ್ಚಿನ ಜ್ಞಾನವನ್ನು ನೀಡುತ್ತದೆ ಎಂದು ಮಂಗಳೂರು ವೃತ್ತ ಪರೀಕ್ಷಾರ್ಥಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ ಹೇಳಿದರು.ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಡಬ ತಾಲೂಕು ಘಟಕದ ವತಿಯಿಂದ ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ12 ರಂದು ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆ, ಮಾಧ್ಯಮಗಳು
ನಮ್ಮ ಸುತ್ತ-ಮುತ್ತ ನಡೆಯುವ ಆಗು-ಹೋಗುಗಳನ್ನು ತಿಳಿಸುವ ಜೊತೆಗೆ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಭರಪೂರ ಮಾಹಿತಿಗಳನ್ನು ಒದಗಿಸುತ್ತದೆ ,ವಿದ್ಯಾರ್ಥಿ ಜೀವನದಲ್ಲಿ
ಇವುಗಳನ್ನು ಹೆಚ್ಚು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಪತ್ರಿಕೋದ್ಯಮದಲ್ಲಿ ಹಲವಾರು ಅವಕಾಶಗಳಿದೆ. ಮೊಬೈಲ್ ಬಂದ ಬಳಿಕ ವಿದ್ಯಾರ್ಥಿಗಳಿಗೆ ಕಲಿಕೆಯ ಮನಸ್ಸು ಕಡಿಮೆ ಆಗಿದೆ ಎಂದು ಶಿಕ್ಷಕರು ಹೇಳುತ್ತಾರೆ. ಆಗಾಗಿ ಮೊಬೈಲ್ ನಿಂದ ಆದಷ್ಟು ದೂರ ಇದ್ದು ಶಿಕ್ಷಣ, ಕಠಿಣ ಪರಿಶ್ರಮಕ್ಕೆ ಆದ್ಯತೆ ನೀಡಿ. ಉದ್ಯೋಗ ಪಡೆಯಲು ಶ್ರಮ ವಹಿಸಿ . ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಗಳು ಕಡಿಮೆಯಾಗಿದ್ದು, ವಿದ್ಯಾರ್ಥಿಗಳ ಬಗ್ಗೆ ಹೆತ್ತವರು ಗಮನ ಹರಿಸಿ, ಕಲಿಕೆಗೆ ಪ್ರೇರಣೆ ನೀಡಬೇಕು ಪತ್ರಿಕಾ ವಿತರಕರು ಮಾಡುವ ಕೆಲಸವನ್ನು ಗುರುತಿಸುವ ಕೆಲಸ ಇನ್ನಷ್ಟು ಆಗಬೇಕು : ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್ ಎನ್.ಕೆ. ಅಧ್ಯಕ್ಷತೆ ವಹಿಸಿದ್ದರು. ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ನಿರ್ದೇಶನ ವಂ.ಆ್ಯಂಟನಿ ಒವೈಸಿ, ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಾರ್ಜ್ ಟಿ.ಎಸ್., ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣ ಗೌಡ, ಪ್ರೌಢಶಾಲಾ ಮುಖ್ಯಗುರು ತೋಮಸ್ ಎ.ಕೆ., ಸಂಘದ ಕಾರ್ಯದರ್ಶಿ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಯಿಲ ಸ್ವಾಗತಿಸಿ ಪ್ರೌಢಶಾಲಾ ಮುಖ್ಯಗುರು ತೋಮಸ್ ಎ.ಕೆ. ವಂದಿಸಿದರು.
ಸನ್ಮಾನ:ಕಾರ್ಯಕ್ರಮದಲ್ಲಿ ನೂಜಿಬಾಳ್ತಿಲದ ಹಿರಿಯ ಪತ್ರಿಕಾ ವಿತರಕಾ ಜಯಕುಮಾರ್ ಜೈನ್ ಕಲ್ಲುಗುಡ್ಡೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪತ್ನಿ ಸುರಭಿ ಜತೆಗಿದ್ದರು. ಪ್ರಶಾಂತ್ ನೆಲ್ಯಾಡಿ ಸನ್ಮಾನ ಪತ್ರ ವಾಚಿಸಿದರು
ಪತ್ರಕರ್ತ ಸಂಘದ ಸದಸ್ಯರಾದ ಪ್ರಕಾಶ್ ಕೋಡಿಂಬಾಳ, ಪ್ರವೀಣ್ ರಾಜ್ ಕೊಯಿಲ, ದಿವಾಕರ ಮುಂಡಾಲ,ತಸ್ಲೀಮ್ ಮರ್ದಾಳ,ಹರೀಶ್ ಬಾರಿಂಜ, ಸುಧಾಕರ ಕಾಣಿಯೂರು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು,ರಾಜಕೀಯ ಮುಖಂಡರು ಭಾಗವಹಿಸಿದ್ದರು.