




ಕಡಬ ಟೈಮ್ಸ್, ಪ್ರಮುಖ ಸುದ್ದಿ: ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಜುಲೈ 2ರಂದು ಕಡಬ ತಾಲೂಕಿನ ಆಡಳಿತ ಸೌಧಕ್ಕೆ ಭೇಟಿ ನೀಡಿ, ತಹಶೀಲ್ದಾರ್ ಪ್ರಭಾಕರ ಖಜೂರೆ ಅವರಿಂದ ತಾಲೂಕು ಮಟ್ಟದ ಆಡಳಿತಾತ್ಮಕ ಮಾಹಿತಿ ಪಡೆದುಕೊಂಡರು.
ಅವರು ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಅರ್ಜಿಗಳನ್ನು ತ್ವರಿತವಾಗಿ ಹಾಗೂ ಸಕಾಲಕ್ಕೆ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು. ಇದೇ ವೇಳೆ, ತಾಲೂಕು ಸಂಬಂಧಿತ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
ಅದೇ ದಿನ, ಜಿಲ್ಲಾಧಿಕಾರಿ ಅವರು ಕೊಯಿಲದಲ್ಲಿರುವ ಗೋಶಾಲೆಯಿಗೂ ಭೇಟಿ ನೀಡಿ ಅವಲೋಕನೆ ನಡೆಸಿದರು. ಈ ಸಂದರ್ಭದಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ,ತಾ.ಪಂ ಇಒ ನವೀನ್ ಭಂಡಾರಿ ಉಪಸ್ಥಿತರಿದ್ದರು.