



KADABA TIMES (ಕಡಬ ಟೈಮ್ಸ್ ) ಕಡಬ: ಆಲಂಕಾರು: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರಿನ ಕಲ್ಲೇರಿ ಬಳಿ ಕಂದಕಕ್ಕೆ ಆಲ್ಟೊ ಕಾರೊಂದು ಬಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರದ ಘಟನೆ ನಡೆದಿದೆ.
ನಿಂತಿಕಲ್ಲು ಅಲೆಕ್ಕಾಡಿ
ಧನರಾಜ್ ಎಂಬವರ ಮಾರುತಿ ಕಾರಿನಲ್ಲಿ ಶಿವಪ್ರಸಾದ್ ಎಂಬವರು ತನ್ನ ಸಂಬಂಧಿಕರನ್ನು ನಿನ್ನೆ ತಡರಾತ್ರಿ
ಆಲಂಕಾರಿನಲ್ಲಿ ಬಿಟ್ಟು ಬರುತ್ತಿದ್ದ ವೇಳೆ ಮಳೆ ಬರುತ್ತಿರುವ ಸಂದರ್ಭದಲ್ಲಿ ಯಾವುದೋ ಪ್ರಾಣಿ ಬಂದಂತೆ
ಗೋಚರಿಸಿದ ಹಿನ್ನಲೆ ರಸ್ತೆಯ ಬದಿಗೆ ಆಲ್ಟೋ ಕಾರನ್ನು ತಿರುಗಿಸಿದ ವೇಳೆ ಅಂದಾಜು 35 ಅಡಿ ಕಂದಕಕ್ಕೆ
ಆಲ್ಟೊ ಕಾರು ಬಿದ್ದಿದೆ.
ಜು.21ರಂದು
ಬೆಳಿಗ್ಗೆ ಕ್ರೈನ್ ಮೂಲಕ ಆಲ್ಟೊ ಕಾರನ್ನು ಕಂದಕದಿಂದ ಹೊರ ತೆಗೆಯಲಾಗಿದೆ. .ಆಲಂಕಾರು ಕಲ್ಲೇರಿಯಿಂದ
ಶರವೂರು ತನಕ ರಾಜ್ಯ ಹೆದ್ದಾರಿಯಲ್ಲಿ ಅನೇಕ ವಾಹನಗಳು ಸಂಚರಿಸುತ್ತಿವೆ. ಈ ಭಾಗದಲ್ಲಿ ಹಲವು ಬಾರಿ ವಾಹನಗಳು ಅಪಘಾತ ಸಂಭವಿಸುತ್ತಿದೆ
ಸವಾರರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.