




ಕಡಬ ಟೈಮ್ಸ್ (KADABA TIMES) ಸುಬ್ರಹ್ಮಣ್ಯ : ಮಡಪ್ಪಾಡಿಯ ವೈದ್ಯಕೀಯ ವಿದ್ಯಾರ್ಥಿಯೋರ್ವ ಕೆರೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಮಡಪ್ಪಾಡಿ ಗ್ರಾಮದ ಬಾಳಿಕಳ ನಿವಾಸಿ ನಿವೃತ್ತ ತಾಲೂಕು
ಆರೋಗ್ಯಾಧಿಕಾರಿ ಡಾ.ನಂದಕುಮಾರ್‌ರವರ ಪುತ್ರ , ಮಂಗಳೂರಿನ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ
ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ ಮೃತಪಟ್ಟವರು.
ಮಂಗಳೂರಿನಲ್ಲಿ ಕಲಿಯುತ್ತಿದ್ದ ಈತ ತನ್ನ ಸಹಪಾಠಿಯೊಂದಿಗೆ ಕೇರಳದ ಕಣ್ಣೂರಿನ ಆತನ ಮನೆಗೆ ಆಸ್ತಿಕ್ ಇಂದು ಬೆಳಿಗ್ಗೆ ಹೋಗಿದ್ದರೆನ್ನಲಾಗಿದೆ. ಬಳಿಕ ಅವರು ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದಾಗ ಕಾಲು ಜಾರಿ ನೀರಲ್ಲಿ ಮುಳುಗಲ್ಪಟ್ಟು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.
ಆಸ್ತಿಕ್ ರಾಘವ್ ರವರ ಪಾರ್ಥಿವ ಶರೀರ ಪೋಸ್ಟ್ ಮಾರ್ಟಂ ಮತ್ತು ಇತರ ಪೋಲೀಸ್ ಪ್ರಕ್ರಿಯೆಗಳು ಬೇಗನೆ ಮುಗಿದ ಬಳಿಕ ಜುಲೈ 21 ಸಂಜೆ ಸುಳ್ಯದ ಮನೆಗೆ ತಲುಪಲಿರುವುದಾಗಿ ತಿಳಿದುಬಂದಿದೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.