ಕಡಬ: ಬುಲೆಟ್ ಹಮೀದ್” ಎಂದೇ ಚಿರಪರಿಚಿತರಾಗಿದ್ದ ಕೊಯಿಲದ ವ್ಯಕ್ತಿ ಹೃದಯಾಘಾತಕ್ಕೆ ಬಲಿ

ಕಡಬ: ಬುಲೆಟ್ ಹಮೀದ್” ಎಂದೇ ಚಿರಪರಿಚಿತರಾಗಿದ್ದ ಕೊಯಿಲದ ವ್ಯಕ್ತಿ ಹೃದಯಾಘಾತಕ್ಕೆ ಬಲಿ

Kadaba Times News

 ಕಡಬ ಟೈಮ್ಸ್ (KADABA TIMES ): ರಾಮಕುಂಜ:  ಕೊಯಿಲ ಗ್ರಾಮದ ಆತೂರುಬೈಲ್ ನಿವಾಸಿ, ಬೋರ್‌ವೆಲ್ ಏಜೆಂಟ್ ಅಬ್ದುಲ್ ಹಮೀದ್ (55ವ.)ರವರು ಜೂ.1ರಂದು ಸಂಜೆ ತನ್ನ ಮನೆಯಲ್ಲಿ ಹೃದಯಾಘಾತಕ್ಕೀಡಾಗಿ ನಿಧನ ಹೊಂದಿದ್ದಾರೆ.



.ಕಳೆದ ಸುಮಾರು 30 ವರ್ಷಗಳಿಂದ ರಾಮಕುಂಜ, ಕೊಯಿಲ, ಆಲಂಕಾರು, ಉಪ್ಪಿನಂಗಡಿ ಪರಿಸರದ ರೈತರಿಗೆ ಬೋರ್‌ವೆಲ್ ವ್ಯವಸ್ಥೆ ಮಾಡಿಕೊಡುತ್ತಿದ್ದರು.  ಎಳೆಯ ವಯಸ್ಸಿನಿಂದಲೇ ಬುಲೆಟ್ ಬೈಕ್‌ನ ಆಸಕ್ತಿ ಹೊಂದಿದ್ದ ಇವರು ದ್ವಿಚಕ್ರ ವಾಹನ ಚಲಾವಣೆ ಹೊಂದಿದಂದಿನಿಂದ ಇಂದಿನ ತನಕವೂ ಎಷ್ಟು ದೂರದ ಪ್ರಯಾಣಕ್ಕೂ ಬುಲೆಟ್ ಬೈಕ್‌ನಲ್ಲೇ ಸಂಚರಿಸುತ್ತಿದ್ದರು. ಹೀಗಾಗಿ “ಬುಲೆಟ್ ಹಮೀದ್ ಎಂದೇ ಚಿರಪರಿಚಿತರಾಗಿದ್ದರು. 


ಒಳ್ಳೆಯ ಸ್ವರ ಮಾಧುರ್ಯ ಹೊಂದಿದ್ದು, ಮಲೆಯಾಳಂ, ಹಿಂದಿ, ಬ್ಯಾರಿ ಹಾಡು ಹಾಗೂ ದಫ್ ಹಾಡುಗಾರನಾಗಿಯೂ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಜೈನಬಾ, ಪುತ್ರರಾದ ಜುನೈದ್, ಝಿಯಾದ್, ಝಾಹಿದ್‌ರನ್ನು ಅಗಲಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top