






ಕಡಬ ಟೈಮ್ಸ್ ,ಪ್ರಮುಖ ಸುದ್ದಿ: ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ, ಜಿಲ್ಲಾ ಪೊಲೀಸ್ ಇಲಾಖೆಯು ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಆರೋಪ ಹೊತ್ತಿರುವ ಒಟ್ಟು 36 ವ್ಯಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿರುವುದಾಗಿ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.
ಈ ಕುರಿತು ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಗಡಿಪಾರಿಗೆ ಪ್ರಸ್ತಾಪಿಸಲಾದ ವ್ಯಕ್ತಿಗಳ ಹೆಸರು, ವಯಸ್ಸು ಹಾಗೂ ಅವರು ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತಾರೆ ಎಂಬ ವಿವರಗಳನ್ನು ನೀಡಲಾಗಿದೆ.
ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಲಾದ ವ್ಯಕ್ತಿಗಳ ವಿವರಗಳು ಹೀಗಿವೆ:
- ಹಸೈನಾರ್ (46 ವರ್ಷ), ಬಂಟ್ವಾಳ ನಗರ
- ಪವನ್ ಕುಮಾರ್ (33 ವರ್ಷ), ಬಂಟ್ವಾಳ ಗ್ರಾಮಾಂತರ
- ಚರಣ್ @ ಚರಣ್ ರಾಜ್ (28 ವರ್ಷ), ಬಂಟ್ವಾಳ ಗ್ರಾಮಾಂತರ
- ಗಣೇಶ @ ಗಣೇಶ ಪೂಜಾರಿ (35 ವರ್ಷ), ವಿಟ್ಲ ಪೊಲೀಸ್ ಠಾಣೆ
- ಅಬ್ದುಲ್ ಖಾದರ್ @ ಸೌಕತ್ (34 ವರ್ಷ), ವಿಟ್ಲ ಪೊಲೀಸ್ ಠಾಣೆ
- ಚಂದ್ರಹಾಸ (23 ವರ್ಷ), ವಿಟ್ಲ ಪೊಲೀಸ್ ಠಾಣೆ
- ಅಬ್ದುಲ್ ಲತೀಫ್ (40 ವರ್ಷ), ಬಂಟ್ವಾಳ ಗ್ರಾಮಾಂತರ
- ಮಹಮ್ಮದ್ ಅಶ್ರಫ್ (44 ವರ್ಷ), ಬಂಟ್ವಾಳ ಗ್ರಾಮಾಂತರ
- ಮೊಯ್ದಿನ್ ಅಮ್ನಾನ್ @ ಅದ್ದು (24 ವರ್ಷ), ಬಂಟ್ವಾಳ ಗ್ರಾಮಾಂತರ
- ಭರತ್ ರಾಜ್ ಬಿ @ ಭರತ್ ಕುಮ್ಡೇಲು (38 ವರ್ಷ), ಬಂಟ್ವಾಳ ಗ್ರಾಮಾಂತರ
- ಮಹಮ್ಮದ್ ಸಫಾನ್ (26 ವರ್ಷ), ಬಂಟ್ವಾಳ ನಗರ
- ರಾಜು ಯಾನೆ ರಾಜೇಶ್ (35 ವರ್ಷ), ಬಂಟ್ವಾಳ ನಗರ
- ಭುವಿ ಯಾನೆ ಭುವಿತ್ ಶೆಟ್ಟಿ (35 ವರ್ಷ), ಬಂಟ್ವಾಳ ನಗರ
- ಅಶ್ರಪ್ ಬಿ @ ಗರಗಸ ಅಶ್ರಪ್ (43 ವರ್ಷ), ಪೂಂಜಾಲಕಟ್ಟೆ
- ಮನೋಜ್ ಕುಮಾರ್ (37 ವರ್ಷ), ಬೆಳ್ತಂಗಡಿ
- ಮಹೇಶ ಶೆಟ್ಟಿ ತಿಮರೋಡಿ (53 ವರ್ಷ), ಬೆಳ್ತಂಗಡಿ
- ಹಕೀಂ ಕೂರ್ನಡ್ಕ @ ಅಬ್ದುಲ್ ಹಕೀಂ (38 ವರ್ಷ), ಪುತ್ತೂರು ನಗರ
- ಅಜಿತ್ ರೈ (39 ವರ್ಷ), ಪುತ್ತೂರು ನಗರ
- ಅರುಣ್ ಕುಮಾರ್ ಪುತ್ತಿಲ (54 ವರ್ಷ), ಪುತ್ತೂರು ನಗರ
- ಮನೀಶ್ ಎಸ್ (34 ವರ್ಷ), ಪುತ್ತೂರು ನಗರ
- ಅಬ್ದುಲ್ ರಹಿಮಾನ್ (38 ವರ್ಷ), ಪುತ್ತೂರು ನಗರ
- ಕೆ. ಅಝೀಜ್ (48 ವರ್ಷ), ಪುತ್ತೂರು ನಗರ
- ಕಿಶೋರ್ (34 ವರ್ಷ), ಪುತ್ತೂರು ಗ್ರಾಮಾಂತರ
- ರಾಕೇಶ್ ಕೆ (30 ವರ್ಷ), ಪುತ್ತೂರು ಗ್ರಾಮಾಂತರ
- ನಿಶಾಂತ್ ಕುಮಾರ್ (22 ವರ್ಷ), ಪುತ್ತೂರು ಗ್ರಾಮಾಂತರ
- ಮಹಮ್ಮದ್ ನವಾಝ್ (32 ವರ್ಷ), ಕಡಬ ಠಾಣೆ
- ಸಂತೋಷ್ ಕುಮಾರ್ ರೈ @ ಸಂತು ಅಡೆಕ್ಕಲ್ (35 ವರ್ಷ), ಉಪ್ಪಿನಂಗಡಿ ಠಾಣೆ
- ಜಯರಾಮ (25 ವರ್ಷ), ಉಪ್ಪಿನಂಗಡಿ ಠಾಣೆ
- ಸಂಶುದ್ದೀನ್ (36 ವರ್ಷ), ಉಪ್ಪಿನಂಗಡಿ ಠಾಣೆ
- ಸಂದೀಪ (24 ವರ್ಷ), ಉಪ್ಪಿನಂಗಡಿ ಠಾಣೆ
- ಮಹಮ್ಮದ್ ಶಾಕಿರ್ (35 ವರ್ಷ), ಉಪ್ಪಿನಂಗಡಿ ಠಾಣೆ
- ಅಬ್ದುಲ್ ಅಝೀಝ್ @ ಕರಾಯ ಅಝೀಝ್ (36 ವರ್ಷ), ಉಪ್ಪಿನಂಗಡಿ ಠಾಣೆ
- ಲತೇಶ್ ಗುಂಡ್ಯ (32 ವರ್ಷ), ಸುಳ್ಯ ಠಾಣೆ
- ಮನೋಹರ @ ಮನು (40 ವರ್ಷ), ಸುಳ್ಯ ಠಾಣೆ
- ಪ್ರಸಾದ್ (35 ವರ್ಷ), ಬೆಳ್ಳಾರೆ ಠಾಣೆ
- ಶಮೀರ್ ಕೆ (38 ವರ್ಷ), ಬೆಳ್ಳಾರೆ ಠಾಣೆ
ಈ ವ್ಯಕ್ತಿಗಳ ವಿರುದ್ಧ ಗಡಿಪಾರು ಪ್ರಕ್ರಿಯೆಗಳನ್ನು ಕೈಗೊಳ್ಳುವ ಮೂಲಕ, ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಲಾಖೆ ಬದ್ಧವಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಕಾನೂನಿನ ಅನ್ವಯ ಈ ಪ್ರಕ್ರಿಯೆಗಳು ಮುಂದುವರಿಯಲಿದ್ದು, ಸಂಬಂಧಪಟ್ಟ ಪ್ರಾಧಿಕಾರವು ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ.