




ಕಡಬ ಟೈಮ್ಸ್ (KADABA TIMES): ಸೋಣಂಗೇರಿ – ಗುತ್ತಿಗಾರು ರಸ್ತೆಯ ಕಂಡಡ್ಕ ಬಳಿ ಕೇರಳ ನೋಂದಣಿಯ ವಾಹನ ರಸ್ತೆ ಬದಿ ನಿಲ್ಲಿಸಲಾಗಿದ್ದು ಜನರ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ಕೇರಳದ
ಅಶೋಕ್ ಲೈಲೆಂಡ್ ಕೆಎಲ್ 08 ಬಿಕೆ 8773 ನೋಂದಣಿಯ ವಾಹನ ಕಳೆದ ಒಂದು ವಾರದಿಂದ ಕಂಡಡ್ಕದಲ್ಲಿ ರಸ್ತೆ ಬದಿ ನಿಲ್ಲಿಸಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಸ್ಥಳೀಯರಲ್ಲಿ ಯಾವುದೇ ಮಾಹಿತಿ ಇಲ್ಲವಾಗಿದೆ. ವಾಹನದಲ್ಲಿ ದೋಷವಿದೆಯೋ ಅಥವಾ ಬೇರೆ ಯಾವುದಾದರೂ ಕಾರಣ ಇರಬಹುದೆ ಎಂಬುದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಪೊಲೀಸರ ಗಮನಕ್ಕೂ ತರಲಾಗಿದೆ ಎಂದು ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಈ ಬಗ್ಗೆ ಸಂಬಂಧ ಪಟ್ಟವರು ರಸ್ತೆ ಬದಿಯಿಂದ ವಾಹನ ತೆರವು ಗೊಳಿಸಲು ಕ್ರಮ ಕೈಗೊಳ್ಳಬೇಕೆಂಬ ಮಾತು ಕೇಳಿ ಬಂದಿದೆ. ಹೆಚ್ಚಿನ ವಿವರ ಲಭ್ಯವಾಗಿಲ್ಲ.