



ಕಡಬ ಟೈಮ್ಸ್, ಸುಳ್ಯ; ಇಲ್ಲಿನ ಸುಳ್ಯ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ಮಹಿಳೆಯೊಬ್ಬರು ಇದ್ದಾಗ ಕಿಟಕಿ ಮೂಲಕ ಯಾರೋ ಫೋಟೋ ತೆಗೆದು ಪರಾರಿಯಾಗಿರುವ ಘಟನೆ ಜ. ೪ ರಂದು ರಾತ್ರಿ ವರದಿಯಾಗಿದೆ.
ಶೌಚಾಲಯಕ್ಕೆ ಮಹಿಳೆ ಹೋಗಿದ್ದಾಗ ಹಿಂಬದಿಯಲ್ಲಿರುವ ಕಿಟಕಿಯ ಮೂಲಕ ಫೋಟೋ ತೆಗೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.ಈ ಭಾಗದ ಕಿಟಕಿಯ ಗ್ಲಾಸ್ ಸರಿದಿದ್ದು ಸರಿದ ಭಾಗದಿಂದ ಫೋಟೋವನ್ನು ಕ್ಲಿಕ್ಕಿಸಿದ್ದಾನೆ ಎಂದು ತಿಳಿದು ಬಂದಿದೆ.
ಮಹಿಳೆ ಈ ಘಟನೆಯನ್ನು ಮತ್ತು ಆತನ ಕೈಯನ್ನು ನೋಡಿದ್ದು ಈ ಸಂಧರ್ಭ ಮಹಿಳೆ ಜೋರಾಗಿ ಕಿರುಚಿಕೊಂಡಾಗ ಆತ ಅಲ್ಲಿಂದ ಪರಾರಿಯಾದ.ಮಹಿಳೆ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ಬಸ್ ನಿಲ್ದಾಣದ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದು ಶೌಚಾಲಯದ ಭಾಗದ ಅವ್ಯವಸ್ಥೆಯ ಬಗ್ಗೆ ಶೀಘ್ರವಾಗಿ ಸರಿಪಡಿಸುವಂತೆ ಸೂಚನೆಯನ್ನು ನೀಡಿದ್ದಾರೆ ಎಂಬ್ ಮಾಹಿತಿ ತಿಳಿ಼ದು ಬಂದಿದೆ.