ಕಡಬ: ರಾತ್ರಿ ವೇಳೆ ಪಾಲೋಳಿ ಸೇತುವೆಯ ಬಳಿ ಪತ್ನಿಯನ್ನು ಬಿಟ್ಟು ಹೋದ ಪತಿರಾಯ!

ಕಡಬ: ರಾತ್ರಿ ವೇಳೆ ಪಾಲೋಳಿ ಸೇತುವೆಯ ಬಳಿ ಪತ್ನಿಯನ್ನು ಬಿಟ್ಟು ಹೋದ ಪತಿರಾಯ!

Kadaba Times News
0

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಾರ್ಯಕ್ರವೊಂದಕ್ಕೆ ತೆರಳುತ್ತಿದ್ದ ದಂಪತಿಗಳಿಬ್ಬರು  ಪರಸ್ಪರ ಜಗಳಾಡಿಕೊಂಡು ಪತಿಯು ತನ್ನ  ಪತ್ನಿಯನ್ನು ಪಾಲೋಳಿ ಸೇತುವೆ ಬಳಿಯಲ್ಲೇ ಬಿಟ್ಟು ಹೋದ ಪ್ರಸಂಗ ಜ.4 (ಶನಿವಾರ )ಕಡಬದಿಂದ ವರದಿಯಾಗಿದೆ.



ಕಡಬದಿಂದ ಎಡಮಂಗಲದತ್ತ   ತೆರಳುತ್ತಿದ್ದ  ದಂಪತಿಗಳು ಯಾವುದೋ ವಿಚಾರದಲ್ಲಿ ಜಗಳವಾಗಿದ್ದು  ಪಾಲೋಳಿ ಸೇತಯವೆ ಬಳಿ ಕತ್ತಲಲ್ಲೇ ಪತ್ನಿಯನ್ನು ಪತಿ  ಬೈಕಲ್ಲಿ ಇಳಿಸಿ ಹೋಗಿದ್ದ ಎನ್ನಲಾಗಿದೆ.


ಸೇತುವೆ ಬಳಿ ಮಹಿಳೆ ಇರುವುದನ್ನು ಗಮನಿಸಿ  ಸ್ಥಳೀಯರು ಗುಂಪು ಸೇರಿದ್ದು  ಬಳಿಕ ಪತಿ- ಪತ್ನಿಯ ಜಗಳವೆಂಬುದು ಗೊತ್ತಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆ ಸ್ಥಳಕ್ಕೆ ಕಡಬ ಗಸ್ತು ನಿರತ ಪೊಲೀಸರು ಆಗಮಿಸಿದ್ದರು. ಬಳಿಕ ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.


 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top