Van Mahotsav week:ಕಡಬದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ

Van Mahotsav week:ಕಡಬದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ

Kadaba Times News

 ಕಡಬ: ಜೀವ ವೈವಿಧ್ಯ, ಆಹಾರ ಸರಪಳಿ, ಪ್ರಾಕೃತಿಕ ಸಮತೋಲನದ ದೃಷ್ಟಿಯಿಂದ ಪರಿಸರ ಸಂರಕ್ಷಣೆ ಇಂದಿನ ಅತಿ ಅಗತ್ಯಗಳಲ್ಲಿ ಒಂದಾಗಿದೆ. ನಮ್ಮ ಪಶ್ಚಿಮ ಘಟ್ಟಗಳು, ಜಲಮೂಲಗಳು, ಕರಾವಳಿಯ ಹಾಗೂ ಮಲೆನಾಡಿನ ಅರಣ್ಯ ಪ್ರದೇಶಗಳು ಪ್ರಕೃತಿಯ ವರವೆಂದು ತಿಳಿದು ಅದರ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣ ತೊಡಬೇಕೆಂದು ಜೆಸಿಐನ ವಲಯ ತರಬೇತುದಾರರಾದ  ಜೆಸಿಐ ಸವಿತಾರಾ ಮುಡೂರು ಹೇಳಿದರು.


ಅವರು ಕಡಬದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ನಡೇದ ವನಮಹೋತ್ಸವ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಪಾಲ್ಗೊಂಡು  ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.





ಸೈಂಟ್  ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ.ಪ್ರಕಾಶ್ ಪಾವ್ಲ್ ಡಿ'ಸೋಜಾ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.  ವನಮಹೋತ್ಸವ ವಿಷಯದ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

 


ಇಕೋ ಕ್ಲಬ್ ವಿದ್ಯಾರ್ಥಿಗಳು ಕರಾವಳಿಯ ಔಷಧೀಯ ಸಸ್ಯಗಳ ಮಾಹಿತಿ ಮತ್ತು ಪ್ರದರ್ಶನ  ಹಾಗೂ  ವನ ಮಹೋತ್ಸವದ ಮಹತ್ವ ಸಾರುವ  ಕುರಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.





ವಿದ್ಯಾ ಸಂಸ್ಥೆಗಳ ರಕ್ಷಕ- ಶಿಕ್ಷಕ ಸಮಿತಿಯ ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಗೌಡ ,ವಾಚಣ್ಣ ಕೆರೆಮೂಲೆ, ಗಿರಿಧರ್ ರೈ , ವಿದ್ಯಾಸಂಸ್ಥೆಗಳ ಮುಖ್ಯಸ್ಥರುಗಳಾದ  ವಂ.ಅಮಿತ್ ಪ್ರಕಾಶ್ ರೋಡ್ರಿಗಸ್, ಕಿರಣ್ ಕುಮಾರ್, ಸಿಸ್ಟರ್ ಹಿಲ್ಡಾ ರೋಡ್ರಿಗಸ್, ಶ್ರೀಲತಾ ಹಾಗೂ ದಕ್ಷಾ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಉಪನ್ಯಾಸಕಿ ಮಮತಾ ಎಂ ,ನಿ.  ಶಿಕ್ಷಕಿ ಏಲಿಕುಟ್ಟಿ , ಸಫ್ರಿನ್ , ಇಕೋ ಕ್ಲಬ್ ನಿರ್ದೇಶಕಿ ವೇದಾವತಿ ಟಿ ಕಾರ್ಯಕ್ರಮ ನಿರ್ವಹಿಸಿದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top