




ಸುಳ್ಯ/ಮಡಿಕೇರಿ: ರಬ್ಬರ್ ಟ್ಯಾಪಿಂಗ್ ಕೆಲಸ ಮುಗಿಸಿ ಶೆಡ್ ಗೆ ಬರುತ್ತಿದ್ದ ಕಾರ್ಮಿಕರೊಬ್ಬರ ಮೇಲೆ ಕಾಡಾನೆ ದಾಳಿಗೆ ಯತ್ನಿಸಿರುವ ಘಟನೆ ಗುರುವಾರ ನಸುಕಿನ ವೇಳೆ ಸುಳ್ಯದಿಂದ ವರದಿಯಾಗಿದೆ.
ಸುಳ್ಯ- ಕೊಡಗು ಗಡಿಭಾಗವಾಗಿರುವ ಮಡಿಕೇರಿ ತಾಲೂಕು ವ್ಯಾಪ್ತಿಯ ಊರು ಬೈಲು ಎಂಬಲ್ಲಿ ಈ
ಘಟನೆ ಸಂಭವಿಸಿದ್ದು
ಕಾರ್ಮಿಕ ರವಿ ಎಂಬವರು ಪವಾಡಸದೃಶ್ಯ ರೀತಿಯಲ್ಲಿ ವ್ಯಕ್ತಿ ಪಾರಾಗಿದ್ದಾರೆ.
ಮುಂಜಾನೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿ ರಬ್ಬರ್ ಶೆಡ್ ನತ್ತ ಬರುತ್ತಿರುವಾಗ ಹಿಂದಿನಿಂದ ಬಂದು ದಿಢೀರ್ ದಾಳಿಗೆ ಯತ್ನಿಸಿದೆ. ರವಿ ಅವರು ದಿಡೀರ್ ಆಗಿ ಓಡಿ ತಪ್ಪಿಸಿಕೊಂಡಿದ್ದಾರೆ. ರೊಚ್ಚಿಗೆದ್ದ ಕಾಡಾನೆ ರಬ್ಬರ್ ಶೆಡ್ ಅನ್ನು ಧ್ವಂಸ ಮಾಡಿದೆ ಎಂದು ತಿಳಿದು ಬಂದಿದೆ.
ಕಳೆದ ಕೆಲ ದಿನದಿಂದ ಈ ಭಾಗದಲ್ಲಿ ಕಾಡಾನೆಯ ಹಾವಳಿ ಇದ್ದು ಅರಣ್ಯ ಇಲಾಖೆಗೆ ಮನವಿ ಕೊಟ್ಟರೂ ಯಾವುದೇ ಮುಂಜಾಗೃತ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಸ್ಥಳೀಯರದ್ದಾಗಿದೆ.ಈ ಬಗ್ಗೆ ಅಲ್ಲಿನ ಸ್ಥಳೀಯ ನ್ಯೂಸ್ ನಾಟ್ ಜೌಟ್ ಡಿಜಿಟಲ್ ಮಾದ್ಯಮ ವರದಿ ಪ್ರಕಟಿಸಿ ವೀಡಿಯೋ ಹಂಚಿಕೊಂಡಿದೆ. ವೀಡಿಯೋ ಇಲ್ಲಿದೆ ನೋಡಿ
ಊರುಬೈಲು: ರಬ್ಬರ್ ಟ್ಯಾಪಿಂಗ್ ಮುಗಿಸಿ ಬರುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿಗೆ ಯತ್ನ..! pic.twitter.com/nnZA52tyDu
— News Not Out (@News_Not_Out) July 11, 2024