




ಸುಬ್ರಹ್ಮಣ್ಯ/ಪಂಜ: ಪಿಕಾಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುದಾಗಿ ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನ ಅಡ್ಡಗಟ್ಟಿ ಪೊಲೀಸ್ ವಶಕ್ಕೆ ಒಪ್ಪಿಸಿರುವ ಘಟನೆ ಜುಲೈ11 ರ ಸಂಜೆ ಪಂಜದಲ್ಲಿ ನಡೆದಿದೆ.
ಕಲ್ಮಡ್ಕದಿಂದ ಪಂಜ ಮಾರ್ಗವಾಗಿ ಪಿಕಪ್ ವಾಹನದಲ್ಲಿ ದನಗಳನ್ನು ತುಂಬಿಸಿಕೊಂಡು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಕೊಡಗು ಜಿಲ್ಲೆಯ ನೋಂದಾವಣಿಯ ಪಿಕಾಪ್ ವಾಹನ ಇದಾಗಿದೆ.
![]() |
ವಾಹನದಲ್ಲಿದ್ದವರ ವಿವರ ಸದ್ಯ ಲಭ್ಯವಾಗಿಲ್ಲ.
ಖಚಿತ ಮಾಹಿತಿ ಮೇರೆಗೆ ಸಂಘಟನೆಯವರು ವಾಹನ ತಡೆದು
ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ. ಪೊಲೀಸರ ಪರಿಶೀಲನೆಯ ಬಳಿಕ ವಾಸ್ತವ ಸಂಗತಿ ತಿಳಿದು ಬರಲಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸುದ್ದಿಯ
ಅಪ್ ಡೇಟ್ ಗಾಗಿ ಕಡಬ ಟೈಮ್ ವೆಬ್ ಪುಟಕ್ಕೆ ಭೇಟಿ ನೀಡುತ್ತಿರಿ.