




ಕಡಬ: ಗ್ರಾ.ಪಂ.ನಿಂದ ಯಾವುದೇ ಅನುಮತಿ ಪಡೆಯದೆ ಗ್ರಾ.ಪಂ. ರಸ್ತೆಯನ್ನು ಅಗೆದು ಮೋರಿ ಹಾಕಿದ ಕಾರಣ ಕುಟ್ರುಪ್ಪಾಡಿ ಗ್ರಾಮದ ಹಳೆಸ್ಟೇಶನ್, ಪೊಟ್ಟುಕೆರೆ, ಹೊಸಕೆರೆ ಸಂಪರ್ಕ ರಸ್ತೆಯು ಸಂಪೂರ್ಣ ಕೆಸರುಮಯವಾಗಿದೆ.
ಇದೀಗ ರಸ್ತೆಯನ್ನು ಸರಿಪಡಿಸಿಕೊಡುವಂತೆ ಅಲ್ಲಿನ ನಿವಾಸಿಗಳು ಕಡಬ ತಹಶೀಲ್ದಾರ್ಗೆ ದೂರು ನೀಡಿದ್ದಾರೆ. ಹಳೆಸ್ಟೇಶನ್ನ ಹೊಸಕೆರೆಯಲ್ಲಿ ಮಳೆಗಾಲದಲ್ಲಿ ನೀರು ಹೆಚ್ಚಾದಾಗ ಹೆಚ್ಚಿನ ನೀರು ಹತ್ತಿರದಲ್ಲಿಯೇ ಇರುವ ಪೊಟ್ಟುಕೆರೆಗೆ ಹರಿದುಹೋಗಲು ವ್ಯವಸ್ಥೆ ಇತ್ತು. ಆದರೆ ಅದನ್ನು ಹತ್ತಿರದ ಪಟ್ಟಾ ಸ್ಥಳದ ಇಬ್ಬರು ಖಾಸಗಿ ವ್ಯಕ್ತಿಗಳು ಮುಚ್ಚಿ ಹಾಕಿ ಪಂಚಾಯತ್ ರಸ್ತೆಯನ್ನು ಆಗೆದು ಹೊಸಕೆರೆಯಿಂದ ಪೊಟ್ಟುಕೆರೆಗೆ ಹೆಚ್ಚಿನ ನೀರು ಹರಿದುಹೋಗಲು ಸಣ್ಣ ಮೋರಿಗಳನ್ನು ಹಾಕಿದ್ದಾರೆ. ಹೀಗಾಗಿ ನೀರು ಕೂಡ ಸಮರ್ಪಕವಾಗಿ ಹರಿದುಹೋಗುತ್ತಿಲ್ಲ.
![]() |
ಹಳೆಸ್ಟೇಶನ್, ಪೊಟ್ಟುಕೆರೆ, ಹೊಸಕೆರೆ ಸಂಪರ್ಕ ರಸ್ತೆಯು ಸಂಪೂರ್ಣ ಕೆಸರುಮ |
ಮೋರಿಗಳು
ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ರಸ್ತೆಯೂ ಕುಸಿದಿದೆ. ಅದರಿಂದಾಗಿ ಹೊಸಕೆರೆಯಲ್ಲಿನ ನೀರು ಹೆಚ್ಚಾಗಿ ಕ್ನಾನಾಯ ಜ್ಯೋತಿ ಶಾಲೆಯ ಹತ್ತಿರ ಮುಖ್ಯರಸ್ತೆಗೆ
ಬರುವ ಸಾಧ್ಯತೆ ಇದೆ. ಹೀಗಾಗಿ ಈ ಪರಿಸರದ
ಕುಟುಂಬಗಳು ಸಮಸ್ಯೆ ಎದುರಿಸುವಂತಾಗಿದೆ. ಮಳೆಗಾಲದಲ್ಲಿಯೇ ರಸ್ತೆಯನ್ನು ಅಗೆದುಹಾಕಿದ ಪರಿಣಾಮವಾಗಿ ಕೆಸರುಮಯವಾಗಿದ್ದು, ವಾಹನ ಸಂಚಾರ ಬಿಡಿ ಜನ ನಡೆದುಹೋಗಲು ಸಾಧ್ಯಯವಾಗುತ್ತಿಲ್ಲ.
ಈ ಬಗ್ಗೆ ಗ್ರಾ.ಪಂ. ಆಡಳಿತಕ್ಕೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ರಸ್ತೆಯನ್ನು ಅಗೆದುಹಾಕಿದವರಿಂದ ರಸ್ತೆಯನ್ನು ಸರಿಪಡಿಸಿಕೊಡಲು ಕೂಡ ಗ್ರಾ.ಪಂ. ನವರು ಕ್ರಮ ಕೈಗೊಂಡಿಲ್ಲ . ಆದುದರಿಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಮಳೆ
ಸುರಿಯುತ್ತಿರುವುದರಿಂದ ರಸ್ತೆಯನ್ನು ದುರಸ್ತಿಗೊಳಿಸಲು ಸಾಧ್ಯವಾಗಿಲ್ಲ ,ರಸ್ತೆಯನ್ನು ಅಗೆದವರಿಂದಲೇ ರಸ್ತೆಗೆ ದಪ್ಪ ಮರಳು (ಚರಳು) ಹಾಕಿಸಿ ಸರಿಪಡಿಸಿಕೊಡಲು ಸೂಚನೆ ನೀಡಿದ್ದೇವೆ ಎಂದು
ಮಾದ್ಯಮವೊಂದಕ್ಕೆ ಕುಟ್ರುಪ್ಪಾಡಿ ಗ್ರಾ.ಪಂ. ಪಿಡಿಓ ಆನಂದ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.