




ಸುಬ್ರಹ್ಮಣ್ಯ :ಪೋನ್ ದೂರೊಂದಕ್ಕೆ ಬಂದ ಪೊಲೀಸರೇ ಕುಡಿದು ಬಂದಿದ್ದಾರೆಂದು ಅನುಮಾನಿಸಿ ಸ್ಥಳದಲ್ಲಿದ್ದ ಸಾರ್ವಜನಿಕರು ಪ್ರಶ್ನಿಸಿದ ಪ್ರಸಂಗ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಗುತ್ತಿಗಾರಿನಲ್ಲಿ ಜುಲೈ, 10 ರಂದು ನಡೆದಿದೆ.
ಪೊಲೀಸರನ್ನು
ಪ್ರಶ್ನಿಸುವ ಹಾಗೂ ಪೊಲೀಸರೊಬ್ಬರು ನಡೆದಾಡಲು ಕಷ್ಟ ಪಡುತ್ತಿದ್ದ ರೀತಿಯಲ್ಲಿ ಇರುವ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಗುತ್ತಿಗಾರು ಬಸ್ ನಿಲ್ದಾಣದಲ್ಲಿ
ಕುಡಿದು ಮಲಗಿದ್ದ ವ್ಯಕ್ತಿಗಳಿಂದ ತೊಂದರೆ ಆಗುತ್ತಿರುವುದರ ಬಗ್ಗೆ ಮಹಿಳೆಯೊಬ್ಬರು ಪೊಲೀಸ್ ಇಲಾಖೆಯ
ಸಹಾಯವಾಣಿ ಸಂಖ್ಯೆ 112 ಗೆ ಕರೆಮಾಡಿ ದೂರು
ನೀಡಿದ್ದರು.
ಬಸ್
ನಿಲ್ದಾಣದಲ್ಲಿದ್ದ ಮದ್ಯಪಾನ
ಮಾಡಿದವರು ಬಾಟಲಿ ಒಡೆದು ಕುಪ್ಪಿ ಚೂರುಗಳನ್ನು ಚೆಲ್ಲಿದ್ದರಿಂದ ಸಾರ್ವಜನಿಕರಿಗೆ
ತೊಂದರೆಯಾಗಿತ್ತು. ಹೀಗಾಗಿ ಮಹಿಳೆಯ
ಪೋನ್ ಕರೆಯ ಆಧಾರದಲ್ಲಿ ಹೊಯ್ಸಳ ಪೋಲಿಸರು ಗುತ್ತಿಗಾರಿಗೆ ಬಂದಿದ್ದರು.
ಬಸ್
ನಿಲ್ದಾಣದಲ್ಲಿದ್ದ ಪಾನಮತ್ತರನ್ನು ಗದರಿಸದೆ ಪೊಲೀಸರು
ಕುಳಿತಿರುವುದನ್ನು ಕಂಡು
ಸಾರ್ವಜನಿಕರೇ ಅನುಮಾನಗೊಂಡಿದ್ದಾರೆ.
ಮೊಬೈಲ್
ನಲ್ಲಿ ಪೋಲೀಸರ ಚಲನವಲನವನ್ನು ಸೆರೆ ಹಿಡಿದಿದರೆನ್ನಲಾಗಿದೆ. ಕೆಲವು
ಮಂದಿ ನೇರವಾಗಿ ಪೋಲೀಸರನ್ನು ಈ ಬಗ್ಗೆ ಪ್ರಶ್ನಿಸಿ,
ಅದನ್ನು ಕೂಡ ವೀಡಿಯೋ ಮಾಡಿಕೊಂಡಿದ್ದಾರೆ.
ಆ ವೀಡಿಯೋದಲ್ಲಿ ನಾವು ಕಡಬ, ಸುಬ್ರಹ್ಮಣ್ಯದವರಲ್ಲ, ಸುಳ್ಯದಿಂದ ಬಂದಿದ್ದೇವೆ. ನಾವು ಮದ್ಯಪಾನ ಮಾಡಿಲ್ಲ , ನನಗೆ ಆರೋಗ್ಯ ಸರಿಯಿಲ್ಲ ನಡೆದಾಡಲು ಆಗುವುದಿಲ್ಲ ಎಂದಿದ್ದು ಆ ವೇಳೆ ಆರೋಗ್ಯ ಇಲ್ಲದವರು ವಾಹನ ಚಲಾಯಿಸುವುದು ಹೇಗೆ, ಗಾಡಿ ಕೊಂಡೋಗಬೇಡಿ ಎಂದು ಪೊಲೀಸರಲ್ಲಿ ವ್ಯಕ್ತಿಯೊಬ್ಬರು ಮನವಿ ಮಾಡಿದ್ದಾರೆ. ಆ ವೇಳೆ ಪೊಲೀಸರು ನಾವು ವಾಹನದಲ್ಲಿ ಹೋಗ್ತೆವೆ, ನಮಗೇನು ಆಗಿಲ್ಲ ಎಂದಿದ್ದು ಆಗ ವ್ಯಕ್ತಿಯೊಬ್ಬರು ನೀವು ಗಾಡಿಯನ್ನು ಬದಿಗೆ ಹಾಕಿ ಮಲಗಿ,ಅನಾಹುತ ಆದರೆ ಯಾರು ಜವಾಬ್ದಾರಿ ಎಂದು ಹೇಳಿದಲ್ಲದೆ ಕುಡಿದು ವಾಹನ ಚಲಾಯಿಸಬೇಡಿ ಎಂದು ಹೇಳುವ ನೀವೆ ಹೀಗೆ ಮಾಡಿದರೆ ಹೇಗೆ ಎಂದು ಹೇಳುತ್ತಿರುವುದು ವೀಡಿಯೋದಲ್ಲಿದೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ
ಹೇಳಿದ್ದೇನು? : ಪೊಲೀಸರ
ಕುರಿತ ವೀಡಿಯೋ ಎಲ್ಲೆಡೆ ಹರಿದಾಡುತ್ತಿರುವ ವಿಚಾರದ ಬಗ್ಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ಯತೀಶ್
ಎನ್ ಅವರನ್ನು ಕಡಬ ಟಿಮ್ಸ್ ಸಂಪರ್ಕಿಸಿದೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಎಸ್.ಪಿ ಯವರು ಘಟನೆಯ
ಬಗ್ಗೆ ಮಾಹಿತಿ ಪಡೆದಿದ್ದೇನೆ. ಡಿವೈಎಸ್ಪಿಯವರಿಗೆ ವರದಿ ನೀಡಲು ಸೂಚಿಸಿದ್ದೇನೆ. ಪರಿಶೀಲಿಸಿ ಸೂಕ್ತ
ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.