




ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಮತ್ತು ಸುಳ್ಯ ಉಭಯ ತಾಲೂಕಿನ ಇಲಾಖೆಗಳಲ್ಲಿನ ಸಿಬ್ಬಂದಿಗಳ ಕೊರತೆ ಸಹಿತ ವಿವಿಧ ಸಮಸ್ಯೆಗಳ ಕುರಿತು ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದು ನಾಲ್ಕು ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡಿದೆ.
ಪ್ರಶ್ನೆ1 : ಸರಕಾರದಿಂದ ಹೈನುಗಾರಿಕೆ ಪ್ರತಿ ಲೀಟರ್ ಹಾಲಿಗೆ ನೀಡಲಾಗುವ ಪ್ರೋತ್ಸಾಹಧನ ಎಷ್ಟು?
ಉತ್ತರ
ನೀಡಿರುವ ಪಶು ಸಂಗೋಪನಾ ಸಚಿವರು ಪ್ರತೀ ಲೀಟರ್ ಗುಣಮಟ್ಟದ ಹಾಲಿಗೆ ರೂ. ೫ರಂತೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹೈನುಗಾರರಿಗೆ ಪಾವತಿಸಬೇಕಾ ಪ್ರೋತ್ಸಾಹಧನ ಮೊತ್ತ ಸುಳ್ಯ ಮತ್ತು ಕಡಬ ತಾಲೂಕಿಗೆ ಪಾವತಿಸಬೇಕಾದ ಬಾಕಿಯ ಕುರಿತು ಶಾಸಕರು ವಿವರ ಕೇಳಿದ್ದು, ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲೂಕಿನ ಹಾಲು ಉತ್ಪಾದಕರಿಗೆ ರೂ. ೪.೩೩ ಕೋಟಿ
ಪ್ರೋತ್ಸಾಹಧನ ವಿತರಣೆಗೆ ಬಾಕಿ ಇದೆ ಎಂದು ಮತ್ತು ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.
ಪ್ರಶ್ನೆ 2 : ಕಡಬ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯತರರ ಕಚೇರಿಯನ್ನು ಪ್ರಾರಂಭಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಚೇರಿ ಆರಂಭ ಮತ್ತು ಸಿಬ್ಬಂದಿ ನೇಮಕಾತಿ ಬಗ್ಗೆ ಸರಕಾರ ಯಾವ ಕ್ರಮ ಕೈಗೊಂಡಿದೆ ?
ಈ
ಪ್ರಶ್ನೆಗೆ ಲೋಕೋಪಯೋಗಿ
ಸಚಿವರು ಉತ್ತರ ನೀಡಿ ಇದು ನಮ್ಮ ಗಮನದಲ್ಲಿದೆ. ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಶ್ನೆ 3:
ಕರ್ನಾಟಕ
ರಾಜ್ಯ
ರಸ್ತೆ
ಸಾರಿಗೆ
ಸಂಸ್ಥೆಯ
ಪುತ್ತೂರು
ವಿಭಾಗಕ್ಕೆ
ಮಂಜೂರಾದ,
ಭಡ್ತಿಗೊಂಡ
ಮತ್ತು
ಖಾಲಿ
ಇರುವ
ಚಾಲಕ,
ನಿರ್ವಾಹಕ
ಮತ್ತು
ಇತರ
ಸಿಬ್ಬಂದಿಗಳ
ಸಂಖ್ಯೆ
ಎಷ್ಟು?
ಸಿಬ್ಬಂದಿ
ಕೊರತೆಯಿಂದ
ಸುಳ್ಯ
ಮತ್ತು
ಕಡಬ
ತಾಲೂಕುಗಳ
ಗ್ರಾಮೀಣ
ಪ್ರದೇಶಗಳಿಗೆ
ಅಗತ್ಯ
ಸಂಚಾರ
ಸೌಲಭ್ಯ
ಸಿಗದೆ
ಸಾರ್ವಜನಿಕರಿಗೆ
ಮತ್ತು
ವಿದ್ಯಾರ್ಥಿಗಳಿಗೆ
ಆಗುತ್ತಿರುವ
ಸಮಸ್ಯೆ
ಕುರಿತು
ಸರಕಾರದ
ಗಮನಕ್ಕೆ
ಬಂದಿದೆಯೇ?
ಏನು
ಕ್ರಮ
ಕೈಗೊಂಡಿದೆ?
ಇದಕ್ಕುತ್ತರಿಸಿದ
ಸಾರಿಗೆ ಸಚಿವರು, ನಿಗಮದ ವತಿಯಿಂದ ಸುಳ್ಯ ತಾಲೂಕಿನ 34 ಗ್ರಾಮಗಳಿಗೆ 37 ಅನುಸೂಚಿಗಳಿಂದ
272 ಏಕಸುತ್ತುವಳಿಗಳಲ್ಲಿ ಹಾಗೂ ಕಡಬ ತಾಲೂಕಿನ ಎಲ್ಲಾ ೪೨ ಗ್ರಾಮಗಳಿಗೆ ೨೩
ಅನುಸೂಚಿಗಳಿಂದ ೯೩ ಏಕಸುತ್ತುವಳಿಗಳಲ್ಲಿ ಸಾರಿಗೆ ಸೌಲಭ್ಯ
ಕಲ್ಪಿಸಲಾಗಿದೆ. ಹೆಚ್ಚಿನ ಸಾರಿಗೆ ಸೌಲಭ್ಯಕ್ಕೆ ಬೇಡಿಕೆ ಬಂದಿದ್ದು, ಆದರೆ ಸಿಬ್ಬಂದಿ ಕೊರತೆಯಿಂದ ಸೌಲಭ್ಯ ಒದಗಿಸಲಾಗಿಲ್ಲ. 2023-2024 ನೇ
ಸಾಲಿನ ಹಿಂದಿನ 7 ವರ್ಷಗಳಲ್ಲಿ ಸಿಬ್ಬಂದಿ
ನೇಮಕಾತಿ ಆಗಿಲ್ಲ. ನಿಗಮದಲ್ಲಿ ಚಾಲನಾ ಸಿಬ್ಬಂದಿಯ ನೇರನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ನಿಗಮಕ್ಕೆ ಸಿಬ್ಬಂದಿಗಳ ಸೇರ್ಪಡೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲು ಪರಿಶೀಲಿಸಿ ಹಂತಹಂತವಾಗಿ ಕ್ರಮ ವಹಿಸಲಾಗುವುದು.
ಪ್ರಶ್ನೆ 4
: ಸುಳ್ಯ
ಮತ್ತು
ಕಡಬ
ತಾಲ್ಲೂಕುಗಳಲ್ಲಿ
ಪ್ರಸ್ತುತ
ಮೋಜಣಿದಾರರು
ನಿರ್ವಹಿಸುತ್ತಿದ್ದಾರೆ
?
ಇದಕ್ಕುತ್ತರಿಸಿದ ಕಂದಾಯ ಸಚಿವರು ಸುಳ್ಯ ತಾಲೂಕಿನಲ್ಲಿ ೧೦ ಜನ ಮತ್ತು ಕಡಬ ೧ ತಾಲ್ಲೂಕಿನಲ್ಲಿ ೮ ಜನ ಪರವಾನಗಿ ಭೂಮಾಪಕರು -ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಉತ್ತರಿಸಿದರು.