




ಕಡಬ ಪಟ್ಟಣ: ಎಡೆಬಿಡದೆ ಸುರಿಯುವ ಮಳೆಗೆ ಹಲವೆಡೆ ರಸ್ತೆ ಸರಿಇಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಇದೀಗ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಲ್ಲಂತಡ್ಕ ಮಡಿವಾಳ್ತಿ ಪರಪ್ಪು ರಸ್ತೆಯಲ್ಲಿ ನೀರು ಹರಿದು ಹೋಗಿ ರಸ್ತೆಯು ತೋಡಿನಂತಾಗಿದೆ .
ಕಡಬ-ಪಂಜ
ರಾಜ್ಯ ಹೆದ್ದಾರಿಯ ಕೋಡಿಂಬಾಳ ಗ್ರಾಮದ ಕಲ್ಲಂತ್ತಂಡ್ಕ ಬಸ್ ತಂಗುತಾಣದ ಹಿಂಬದಿಯಲ್ಲಿರುವ ರಸ್ತೆಯೇ
ಮಡಿವಾಳ್ತಿಪರಪ್ಪು ರಸ್ತೆ. ಸದ್ಯ ಈ ರಸ್ತೆಯಲ್ಲಿ
ಸಾಗುವ ನಿವಾಸಿಗಳು ಕನಿಷ್ಟ ಚರಂಡಿಯನ್ನು ದುರಸ್ತಿ
ಮಾಡಿ ಕೊಡಿ ಎಂದು ಸ್ಥಳೀಯಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.
ಮುಖ್ಯ
ರಸ್ತೆಯಿಂದ ಮೋರಿ ಮೂಲಕ ಬರುವ ನೀರು ಈ ರಸ್ತೆಯಲ್ಲಿರುವ ಕಿರಿದಾದ ಚರಂಡಿಯನ್ನು ಸೇರಿಕೊಳ್ಳುತ್ತದೆ.
ಈ ರಸ್ತೆಯ ಚರಂಡಿಗಳಲ್ಲಿ ಗಿಡಗಂಟಿಗಳಿಂದ ಆವೃತವಾಗಿದೆ. ಜೋರು ಮಳೆ
ಸುರಿಯುವ ಸಂದರ್ಭದಲ್ಲಿ ಈ ರಸ್ತೆ ಸಂಪೂರ್ಣ ತೋಡಿನಂತಾಗಿ ಬದಲಾಗುತ್ತಿದೆ.
ಈ ರಸ್ತೆಯ ಎರಡೂ ಬದಿಯಲ್ಲಿ ಚರಂಡಿಗಳು ಸಮರ್ಪಕವಾಗಿಲ್ಲದಿರುವುದೇ ಈ ಸಮಸ್ಯೆಗೆ ಕಾರಣ ಎನ್ನುವುದು ಸ್ಥಳೀಯರ ದೂರು. ಮುಖ್ಯ ರಸ್ತೆಯಿಂದ ಸುಮಾರು ನೂರು ಮೀಟರ್ ನಷ್ಟು ಕಾಂಕ್ರೀಟಿರಣ ಮಾಡಲಾಗಿದೆ. ಮುಂದಕ್ಕೆ ಮಣ್ಣಿನ ರಸ್ತೆಯಿದ್ದು ಮುಖ್ಯ ರಸ್ತೆಯಿಂದ ಮೋರಿ ಮೂಲಕ ಹರಿಯುವ ನೀರು ಈ ರಸ್ತೆಯಲ್ಲಿ ಹರಿದು ಕೆಸರುಮಯವಾಗಿದೆ.ಈ ರಸ್ತೆಯು ಕೊಪ್ಪ ಪ್ರದೇಶವನ್ನು ಸಂಪರ್ಕಿಸುತ್ತದೆ.
ಹೀಗಾಗಿ ವಾಹನ ಸವಾರರು ಸಂಕಷ್ಟ ಪಡುತ್ತಿದ್ದಾರೆ. ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಚಂರಡಿ ಸರಿಪಡಿಸಿದಲ್ಲಿ ಸಂಚಾರಯೋಗ್ಯವಾಗಲಿದೆ ,ಪಟ್ಟಣ ಪಂಚಾಯತ್ ಚರಂಡಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಜಗದೀಶ್ ಅವರು ಒತ್ತಾಯಿಸಿದ್ದಾರೆ.